Friday, July 23, 2004

naanu nanna nenapu - ನಾನು ನನ್ನ ನೆನಪು

ನೆನಪು -- nenapu

KannadaAudio.com Forum - naanu nanna nenapu:


ನೆನಪು ..

ಪೂರ್ಣ ಚಂದಿರ ನಾಚುವಂತಹ ಕಂಜ ಮುಖದಾ ನೆನಪದು
ರವಿಗೆ ತುಲಿಸುವ ನಯನದಿಂ ಜಗ ಬೆಳಗೋ ಭಾಸದ ನೆನಪದು
ಬಳಿಗೆ ಬಂದೊಡೆ ರೋಮ ರೋಮಗಳೆಲ್ಲ ನಿಂತಾ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೧||

ಕಂಠ ಸುಮಧುರ, ಗಾನ ಕೋಗಿಲೆ ನಾಚಿ ನಿಂತಾ ನೆನಪದು
ಕಾಯ ವರ್ಣವ ಂಡು ನಿನ್ನಯ ಹೊನ್ನು ಸೋತಿಹ ನೆನಪದು
ಕರದ ಸ್ಪರ್ಶದಿ ಮನವ ಪುಳಕಿಸಿದೆಂತ ಸುಂದರ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೨||

ನವಿರು ರೇಶಿಮೆ ಮುಡಿಯ ವೇಣಿಗೆ ಸೋತು ಸೊರಗಿದ ನೆನಪದು
ಬಿಂಕ ವೈಯಾರದಿ ಮಯೂರಗೆ, ಸೊಕ್ಕು ಮುರಿದಾ ನೆನಪದು
ನನಿಹ ಕೂತಿರೆ, ಸವಿಯ ಮಾತಿಗೆ, ನನ್ನೆ ಮರೆತಾ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೩||

ತಾಯಿ ಪ್ರೀತಿಯ ಸಮಕೆ ಹೃದಯವ ಪೂರ್ಣ ತುಂಬಿದ ನೆನಪದು
ಕಠಿಣ ಕಾಲದೊಳೊಡನೆ ನಿಂತು ಸಖಿತ್ವ ನೀಡಿದ ನೆನಪದು
ಬಾಳ ಸಂಗತವೆಂದು ಕಟ್ಟಿದ ಸ್ವಪ್ನಗೋಪುರ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೪||

6 comments:

  1. uts borring poem man......................am sory

    ReplyDelete
  2. Very very nice maga

    ReplyDelete
  3. Nice poem..Here is mine.


    ನೆನಪು --ಕನಸು
    ಒಲವೆಂಬ ಸುಧೆಯಲ್ಲಿ ಬಿದ್ದ ದುಂಬಿಯಂತೆ ,
    ಅತ್ತ ತೇಲಲು ಆಗದೆ ಇತ್ತ ಮುಳುಗಲು ಆಗದೆ
    ತವಕ ಪಡುತ್ತಿರುವ ನಾ ನೊಬ್ಬ ಭಗ್ನಪ್ರೇಮಿ ...:-(

    ಕಾಯುತ್ತಿರುವೆ ನಾನು ನನ್ನ ಮುಂದಿನ ಸುದಿನಗಳತ್ತ,
    ಹಳೆಯ ನೆನಪುಗಳನ್ನೆಲ್ಲ ಮರೆಯುತ ,
    ಹೊಸ ಕನಸುಗಳಿಗಾಗಿ ಹಾತೊರೆಯುತ್ತಿರುವ
    ನಾ ನೊಬ್ಬ ಆಶಾವಾದಿ...

    ನೂರಾರು ಕನಸುಗಳಿವೆ ಎಂದು ನಾ ಬಲ್ಲೆ,
    ಈ ಕನಸುಗಳಿಗಾಗಿ ಮರೆಯಬೇಕು ನನ್ನ ಆ ಕಹಿ ದಿನಗಳನ್ನ ,
    ಈ ಕನಸೆಲ್ಲ ನನಸು ಮಾಡಿ ನಾ ನನ್ನ ಜೀವನದಲ್ಲಿ
    ಗೆದ್ದೇ ಗೆಲ್ಲುವೆ ವಿಜಯಿಯಾಗಿ... :-)
    **ಸಚ್ಚಿ **

    ReplyDelete
  4. the worst poem ever............you suck man sorry but!!

    ReplyDelete