KannadaAudio.com Forum - supta praje:
ಸುಪ್ತ ಪ್ರಜೆ
ಏಳು ಮಲಗಿಹ ಭಾರತೀಯನೆ ಕೀಳು ಗೀಜನು ಬೇಗನೆ
ಏಳು ಸ್ವಂತಿಕೆ ಮರೆತ ವೀರನೆ ಮಸಿಯ ಒರೆಸುತ ಛಂಗನೆ
ಸಾಲು ಸಾಲಲಿ ನಿಂತು ಯೋಧರು ಮಾಡೆ ಹೊರಗಿನ ರಕ್ಷಣೆ
ಬಾಳು ಸಾರ್ಥಕ ಮಾಡೆ ಒಳಗಿನ ಕ್ಷಾತ್ರ ತೇಜದ ವರ್ಧನೆ
ಕಿತ್ತು ಬಿಸುಡುತ ಮನೆಯ ಮೋಹವ, ರಭದಿ ನೀ ಹೊರ ನುಗ್ಗುತ
ಬಿತ್ತು ಹೃದಯದಿ ರಾಷ್ತ್ರಭಕ್ತಿಯ, ಸ್ವಾರ್ಥ ಕಡಲನೆ ಕಡೆಯುತ
ತುತ್ತು ನೀಡಿದ ಭೂಮಿತಾಯಿಯ, ಕತ್ತು ಕುಯ್ಯುತಲಿರುವಡೆ
ಗತ್ತು ಗರ್ವವ ಬಿಟ್ಟು ಬಾರೆಯ ಸಿಟ್ಟಿನಿಂ ರಣರಂಗಕೆ
No comments:
Post a Comment