KannadaAudio.com Forum - utsAhadi bari...ullAsadi nali
ರವಿಯು ಮೂಡುವ ಮೂಡಣದಿ ಏಕೆನ್ನುವುದೆ ಆ ಯೋಚನೆ,
ಉದಯ ರವಿಯಿಂ ಸ್ಪೂರ್ತಿ ತಳೆಯುತ ದಿನವ ಬೆಳಗೋ ಚಿಂತನೆ
ನದೆಯ ಮೂಲವದೆಲ್ಲಿದೆಯೋ ನಾ ತಿಳಿಯಬೇಕದು ಯೋಚನೆ,
ಸಲಿಲ ಸರಿತೆಯ ತಟದಿ ವಿಹರಿಸಿ ದುಗುಡ ಮರೆವುದೇ ಚಿಂತನೆ
ತನ್ನ ಬದಲಿಸೋ ಯತ್ನದಿಂದಲೆ ಪರರ ಮೆಚ್ಚಿಸೋ ಯೋಚನೆ,
ತಾನು ತಾನಾಗಿರಲು ಎಲ್ಲರ ಹೃದಯ ಗೆಲ್ಲುವ ಚಿಂತನೆ
ನೆನ್ನೆ ಮೊನ್ನೆಯ ಗತ ದಿನಾಂಕದ ನೋವಿನಲ್ಲಿದೆ ಯೋಚನೆ,
ನಾಳೆ ದಿವಸದ ಹೊಸ ಭವಿಷ್ಯವ ಮಾಡು ಸುಂದರ ಚಿಂತನೆ
ಬಿಡೆಯ ನೇ ನಿನ ಮನಸಿನೊಳಗಿನ ಅರ್ಥವಿಲ್ಲದ ಯೋಚನೆ,
ಸ್ಫೂರ್ತಿ ತಳೆಯುತ ದುಗುಡ ಮರೆಯುತ ಮಾಡು ಸಾರ್ಥಕ ಚಿಂತನೆ
No comments:
Post a Comment