ರಾತ್ರಿ ಎಲ್ಲಿಂದ್ಲೋ ಬರೋ ಅಷ್ಟ್ರಲ್ಲಿ ಸುಮಾರು ೧೧ ಘಂಟೆ ಆಗಿತ್ತು. ಈಗ ಅವ್ರ classನಲ್ಲಿ ಶಿವಾನಂದ ಲಹರಿ ಶುರು ಆಗಿದೆ. So, ನಾನು ಸುಮ್ನೆ ಆ ಪುಸ್ತಕ ತೆಗೆದು ಓದಕ್ಕೆ ಶುರು ಮಾಡಿದೆ. ನನಗೆ ಕೆಲವು doubts ಬಂತು .. ಹಾಗೆ ಚರ್ಚೆ ಶುರು ಆಯ್ತು.
ಹಿನ್ನೆಲೆ: ಶಿವಾನಂದ ಲಹರಿಯು ಈಶ್ವರನನ್ನು ಕುರಿತು ಶಂಕರ ಭಗವತ್ಪಾದರು ರಚಿಸಿರುವ ಉತ್ಕೃಷ್ಟವಾದ ಕೃತಿ. ಅದರಲ್ಲಿ ಶಿವನನ್ನು ಹೊಗಳುತ್ತಾ ಬೇರೆ ಇತರ ದೇವತೆಗಳಿಗಿಂತ ಶಿವ ಹೇಗೆ ಉನ್ನತ ಎಂದು ವಿವರಿಸ್ತಾರೆ. ಅಲ್ಲಿಂದಲೆ ನನ್ನ ಸಂದೇಹಗಳು ಶುರುವಾಯ್ತು. ನಿಮಗೆಲ್ಲ ತಿಳಿದಿರುವಂತೆ ಶಂಕರೇ ಅದ್ವೈತ ಸಿದ್ಧಾಂತವನ್ನು ಮಂಡಿಸಿದ್ದು. ನನ್ನ ಸಂದೇಹ ನಿಮ್ಮ ಮುಂದೆ ಇಡುವ ಮುಂಚೆ ಅದ್ವೈತದ basics ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ.
ಅದ್ವೈತದ ಪ್ರಕಾರ:
- ’ದೇವ’ನೊಬ್ಬ ನಾಮ ಹಲುವು - ಏಕಂ ಸದ್ವಿಪ್ರಾ ಬಹುಧಾ ವದಂತಿ
- ’ದೇವ’ನು ನಿರಾಕಾರ, ನಿರ್ವಿಕಾರ, ಅನಾದಿ, ಅನಂತ, ನಿರ್ವಣಿ, ನಿರ್ಭಾವ, ನಿಸ್ಸ್ವಭಾವ
- ಆತ್ಮ ಪರಮಾತ್ಮನ ಒಂದು ಭಾಗ - ಅಹಂ ಬ್ರಹ್ಮಾಸ್ಮಿ ಅನ್ನೋ ವಾದ
- ಪರಮಾತ್ಮ ನಮ್ಮೋಳಿಗಿರುವ ಅನುಭವ ಕೇವಲ ಜ್ಞಾನಯೋಗದಿಂದ ಬರುತ್ತದೆ
.. ಏನು ಇಷ್ಟೊಂದು inconsistency ಅಂತ ನನ್ನ ಸಂದೇಹ ಶುರು ಆಯ್ತು. ಉದಾಹರಣೆ ಕೆಳಗಿನ ಶ್ಲೋಕ
ಆಕಾರವನ್ನು ವರ್ಣಿಸುತ್ತಾ:
ಪರಮಾತ್ಮನಿಗೆ ಆಕಾರವಿಲ್ಲವೆಂಬ ಸತ್ಯ ಗೊತ್ತಿದ್ದರೂ ಶಂಕರರು ಈ ಮೇಲಿನ ಶ್ಲೋಕದಲ್ಲಿ ಆಕಾರದ ಬಗ್ಗೆತ್ರಯೀ ವೇದ್ಯಂ ಹೃದ್ಯಂ ತ್ರಿಪುರಹರಮಾದ್ಯಂ ತ್ರಿನಯನಂ
ಜಟಾಭಾರೋದಾರಂ ಚಲದುರಗಹಾರಂ ಮೃಗಧರಮ್
ಮಹಾದೇವಂ ದೇವಂ ಮಯಿ ಸದಯಭಾವಂ ಪಶುಪತಿಂ
ಚಿದಾಲಂಬಂ ಸಾಂಬಂ ಶಿವಮತಿವಿಡಂಬಂ ಹೃದಿ ಭಜೆ
ಅದೆಷ್ಟು ವರ್ಣಿಸಿದ್ದಾರೆ ಅಲ್ಲವೇ? ಏಕೆ ?
ಅದೇ ರೀತಿ ಶಿವನ ಔನ್ನತ್ಯವನ್ನು ವಿವರಿಸುತ್ತಾ:
ಮೇಲಿನ ಶ್ಲೋಕದಲ್ಲಿ ಇತರ ದೇವತೆಗಳನ್ನು ಕ್ಷುದ್ರಫಲ ಕೊಡುವವರೆಂದು ಕರೆದಿದ್ದಾರೆ. ಅದ್ವೈತದ ಪ್ರಕಾರ, ಹರಿಹರಬ್ರಹ್ಮರೆಲ್ಲರೂ ಒಬ್ಬರೆ ಅಲ್ಲ್ವೆ? ಶಂಕರು ಈ ರೀತಿ ಹೇಗೆ ಬರೆಯಲು ಸಾಧ್ಯ ಅಂತಾನೆ ನನ್ನ ಮೂಢಮತಿಗೆ ತಿಳಿಯಲಿಲ್ಲ. ಅದಕ್ಕೆ ಅಮ್ಮ ಬಹಳ ಚೆನ್ನಾಗಿ ಪರಿಹಾರ ನೀಡಿದರು. ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುವ ಮುನ್ನ ನಿಮ್ಮ ಅಭಿಪ್ರಾಯ ?ಸಹಸ್ರಂ ವರ್ತಂತೇ ಜಗತಿ ವಿಬುಧಾಃ ಕ್ಷುದ್ರಫಲದಾ
ನ ಮನ್ಯೆ ಸ್ವಪ್ನೇ ವಾ ತದನುಸರಣಂ ತತ್ಕೃತ ಫಲಮ್
ಹರಿಬ್ರಹ್ಮಾದೀನಾಮಪಿ ನಿಕಟಭಾಜಾಮಸುಲಭಂ
ಚಿರಂ ಯಾಚೆ ಶಂಭೋ ತವ ಪದಾಂಭೋಜ ಭಜನಂ
5 comments:
Kartik,
I have been thinking about this for past one day (after reading your post)!
First of all, I am not well versed in Samskritha and hence I am not able to see, if this shloka has got more than one meaning. Many Samskritha shlokas are like that.
There is one famous rachane with dual meaning "Kehsavam pathitham dhrushtva anunandithah pandavah| Rurudhra kauravah sarve ha keshava ha keshava".
In the same way, this shloka can have an entirely different meaning , than what we are thinking of.
Another thought that came to my mind is, when a person starts thinking about one god, he will start thinking about all the great gunas of this god. And when this god becomes great, all the other gods become small or kshudra.
I am not telling that, there is more than one god. Even though we know that god is one, we still do pooja of a form or vigraha. So, in this sense Shankara gave a form to the god and personified it with different gunas, etc!
I am curious to know your thoughts about this and what your mother told:)
-Narendra
Kar, I tried hard to read and understand this post. I got the 'inconsitency' you're talking about. But then, it's difficult to read Kannada in this form on your blog - not sure if you can do better with fonts or something else. Or maybe I should customize some settings on my side?
Nevertheless, I'm deeply humbled by this post - yet again, I realize the infinite things I don't know, I could try to understand and cherish. I'm sure one lifetime is not enough.
ಈ ಪೋಸ್ಟ್ ಅದ್ಯಾವಾಗ ಹಾಕಿದ್ನೋ ಆಫೀಸ್ನಲ್ಲಿ ತುಂಬ ಬಿಜಿ ಆಗ್ಬಿಟ್ಟೆ.
@ನರೇಂದ್ರ:
ನೀವು ಹೇಳಿದ್ದು ಬಹಳ ಸಮಂಜಸವಾಗಿದೆ. ಬಹುಶಃ ಶ್ಲೋಕ ಹಲವಾರು ಅರ್ಥ ಕೊಡೋ ರೀತಿ ಇರಬಹುದು. ಆದರೆ ನಿಮ್ಮ ಎರಡನೇ ಪರಿಹಾರವೇ ನನ್ನ ಪ್ರಶ್ನೆಯಾಗಿದೆ. ನಮ್ಮಮ್ಮ ಹೇಳಿದೆ ಪರಿಹಾರವೂ ನಿಮ್ಮ ಎರಡನೇ ಆಲೋಚನೆಗೆ
ಹತ್ತಿರವಾಗಿದೆ.
ನಮ್ಮಮ್ಮ ಕೊಟ್ಟ ಪರಿಹಾರ: ಶಂಕರರ ಮಟ್ಟಕ್ಕೆ ವಿಗ್ರಹಾರಾಧನೆ, ಒಂದಕ್ಕಿಂತ ಹೆಚ್ಚಿನ ದೈವ ಇವೆಲ್ಲ ಇಲ್ಲ. ಅವರದು ಅತ್ಯುನ್ನತ ಜ್ಞಾನದ ಸ್ಥತಿ. ಆದರೆ ಆ ಮಟ್ಟಕ್ಕೆ ಸಾಮಾನ್ಯ ಜನ ತಲುಪಲು ಅನೇಕ ಆಧಾರಗಳು (supports)
ಬೇಕು. ವಿಗ್ರಹ, ರೂಪ, ಸ್ವರೂಪ, ಆಕಾರ, ಗುಣಗಳು ಇವೆಲ್ಲ ಆಧಾರಗಳು.ಇವುಗಳ ಮೂಲಕ ಜ್ಞಾನ ಸಂಪಾದನ ಮಾಡುತ್ತ ಮಾಡುತ್ತ ಬ್ರಹ್ಮದ ಬಗ್ಗೆ ಜಿಜ್ಞಾಸಿಯಾಗಿ, ಅದನ್ನು ಹುಡುಕುತ್ತಾ ಹೋದಾಗ ಅರಿವಾಗುವುದೇನೆಂದರೆ,
ತಾನು ಹಾಕಿಕೊಂಡಿದ್ದ ಆಧಾರಗಳೆಲ್ಲ ಮಿಥ್ಯ. ದೈವಕ್ಕೆ ಆಕಾರ,ವಿಕಾರ, ಗುಣಗಳು ಯಾವುವೂ ಇಲ್ಲ ಎಂದು. ಆದರೆ ಸಾಮಾನ್ಯ ಜನರಿಗೆ ಈ ಸತ್ಯ ತಿಳಿಸಬೇಕಾದರೆ ಅವರಿಗೆ ದೈವ ಜ್ಞಾನವಿರಬೇಕಾಗುತ್ತದೆ. ಆ ಸತ್ಯವನ್ನು accept
ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದ್ದರಿಂದ ಆ ಪರಮ ಸತ್ಯಕ್ಕೆ ಜನರನ್ನು ತಲುಪಿಸಲು ಬೇಕಾದ ಸಾಧನೆಗಳೇ ಶ್ಲೋಕಗಳು, ದೇವರ ಸ್ತುತಿಗಳು. ಆ ಸ್ತುತಿಗಳಲ್ಲಿ ಆ ದೈವದ ಗುಣಗಾನಗಳು ಇವೆಲ್ಲ ಬರೆಯುತ್ತಾರೆ.
ಕಾರ್ತೀಕ್,
ಅದ್ವೈತದ ಬಗ್ಗೆ ತಿಳಿಯ ಹೊರಟಾಗ(ನಾನು ಈವರೆಗೂ ತಿಳಿದದ್ದು ಅತ್ಯಲ್ಪ!) ನನಗೆ ಮೊದಲು ಕಾಡಿದ್ದು ಇದೇ ಬಗೆಯ ಪ್ರಶ್ನೆ.
ಶಂಕರಾಚಾರ್ಯರ ಪ್ರಕಾರ "ಆತ್ಮ ಹಾಗು ಪರಮಾತ್ಮ ಎರಡೂ ಒಂದೆ, ನಿಮ್ಮೊಳಗೆ ಭಗವಂತನಿದ್ದಾನೆ" ಹಾಗಿದ್ದರೆ ಅವರು ಶಾರದಾ ಪೀಠ ಸ್ಥಾಪನೆಯನ್ನು ಯಾವ ಉದ್ದೇಶಕ್ಕಾಗಿ ಮಾಡಿದರು ಎಂಬ ಬಲವಾದ ಸಂದೇಹ ಹುಟ್ಟಿತ್ತು. ಆಗ ನನ್ನ ಆಪ್ತ ಗೆಳೆಯರನ್ನೋರ್ವರನ್ನು ಕೇಳಿದಾಗ, ಅವರೂ ಹೆಚ್ಚೂ ಕಡಿಮೆ ನಿಮ್ಮ ತಾಯಿಯವರು ಹೇಳಿದ ಉತ್ತರವನ್ನೇ ಹೇಳಿದರು. ಆತ್ಮ ಹಾಗು ಪರಮಾತ್ಮ ಎರಡೂ ಒಂದೇ ಅನ್ನುವ ಸ್ಥಿತಿಯು ಅತ್ಯುನ್ನತವಾದುದು. ಅದನ್ನು ತಲುಪಲು ಇರುವ ಒಂದೇ ಮಾರ್ಗವೆಂದರೆ ಭಕ್ತಿ ಮಾರ್ಗ, ಹಾಗಾಗಿ ಸಾಮಾನ್ಯ ಜನರಿಗೆ ಭಗವಂತ ನಿಲುಕಲು ಹೀಗೆ ಮಾಡುವುದು ಅನಿವಾರ್ಯ. ಅಹಂ ಬ್ರಹ್ಮಾಸ್ಮಿ ಎಂಬ ಸತ್ಯ ಕಂಡುಕೊಳ್ಳಲು ಇದೊಂದೆ ಮಾರ್ಗ ಎಂದು ಹೇಳಿದರು..
@ಭಾವಜೀವಿ:
ಬಹಳ ಸಮಂಜಸವಾಗಿ ಹೇಳಿದಿರಿ
Post a Comment