Tuesday, April 08, 2008

ಇದೂ ಸಹ ನಿಮಗೆ ಗೊತ್ತೆ ??

ಕಳೆದ post ನಲ್ಲಿ ಕೆಲವು ಅಪರೂಪದ ಪದಗಳನ್ನ ಪಟ್ಟಿ ಮಾಡಿದ್ದೆ. ಇದರ ಬಗ್ಗೆ ಮನೆಯಲ್ಲಿ ಚರ್ಚೆ ಮಾಡಿದಾಗ ಇನ್ನೂ ಕೆಲವು ಪದಗಳು ಹೊರ ಬಂದವು. ಕೆಲವನ್ನು ನಾನು observe ಮಾಡಿದೆ. ನಿಜವಾಗಲೂ ಇದನ್ನ ಮನೆಯಲ್ಲಿ casual ಆಗಿ ಉಪಯೋಗಿಸುತ್ತಾರೆಂದರೆ ನನಗೆ ನಿಜಾಗಲೂ ಆಶ್ಚರ್ಯ ಆಗತ್ತೆ.

1. ಕಣಕ: ಒಬ್ಬಟ್ಟು/ ಚಪಾತಿ ಮಾಡಲು ಕಲಸಿದ ಹಿಟ್ಟು. (Dough)

2. ಗಳು: ತೆಳುವಾದ ಕಡ್ದಿ/ ಸಣ್ಣ ಕೋಲು. ದಬ್ಬೆ ಗೊತ್ತಲ್ಲ್ವ? ಅದೆ ನಮ್ಮ ಮನೆ drainage pipe ಕಟ್ಟಿಕೊಂಡ್ರೆ ದಬ್ಬೆ ಹಾಕಿ ಶುಚಿ ಮಾಡ್ತಾರಲ್ಲ. ಅದಕ್ಕೆ ಗಳು ಅಂತಾನೂ ಕರೀತಾರೆ.

3. ಗುಬ್ರ್ಹಾಕ್ಕೊ: ಗುಬ್ರು is same as ಮುಸುಕ್ಹಾಕ್ಕೊ

4. ಹಂಕು/ ಹಪಾಪಿ : ಎರಡೂ ಒಂದೇ ಅರ್ಥ. ತುಂಬಾ restless ಆಗಿ ಆಡ್ತಾ ಇದ್ದ್ರೆ, ಅದ್ಯಾಕೋ ಹಾಗೆ ಹಂಕ್ ಹಂಕ್ ಆಗಿ ಆಡ್ತಾ ಇದೀಯ ? ಅಥವಾ ಯಾಕೋ ಹಪಾಪಿ ಮುಂಡೇದೆ ಊಟ ಮಾಡಿಲ್ಲ್ವ ?

2 comments:

Shashi said...

Ivella aaDu bhashe padagaLa? Bere bhashegaLinda kannaDakke bandiro padagaLu irabahudu...

Karthik CS said...

ಬೇರೆ ಭಾಷೆಯಿಂದ ಬಂದಿರಬಹುದು ಆದರೂ ಇವೆಲ್ಲ ನಮ್ಮ ಮನೆಗಳಲ್ಲಿನ ಆಡು ಭಾಷೆ. infact ಇವೆಲ್ಲ ನಾನು ನಮ್ಮ ಮನೆಯಲ್ಲೇ observe ಮಾಡಿದ ಪದಗಳು..