KannadaAudio.com Forum - namana gaNapatige:
ನಮನ ಗಣಪತಿಗೆ ತತ್ವನಾದವಗೆ ವಿಶ್ವದಣುವಣುವ ಕರ್ತನಿಗೆ
ಪೂರ್ಣ ಬ್ರಹ್ಮಾಂಡ ಧರಿಸಿದಾತನಿಗೆ ನಮನವಿದು ಲಯ ಕರ್ತನಿಗೆ
ಎಲ್ಲ ಜೀವಿಗಳ ಆತ್ಮನಾದವನೆ ಹರಸು ನನ್ನಯ ಹರಸುತನೆ
ಹರಸು ನಿನ್ನಯ ನಾಮ ನುಡಿವನ ಹರಸು ಸ್ಮರಿಸುತ ಕೇಳ್ವನ
ಹರಸು ಮೂಡಣದಿಂದ ನನ್ನಯ ಹರಸು ದಕ್ಷಿಣದಿಂದಲಿ
ಹರಸು ಪಡುವಣದಿಂದ ನನ್ನಯ ಹರಸು ಉತ್ತರದಿಂದಲಿ
ಹರಸು ಗಣಪನೆ ಊರ್ಧ್ವದಿಶಿಯಲಿ ಹರಸು ಅಧರದ ದಿಶಿಯಲಿ
ಎಲ್ಲ ದಿಕ್ಕುಗಳಿಂದ ನನ್ನನೆ ರಕ್ಷಿಸೋ ಗಣಾಥನೆ
ನೀನು ವಾಜ್ಮಯ ನೀನು ಚಿನ್ಮಯ ನೀನು ಆನಂದ ಪೂರನು
ನೀನು ಬ್ರಹ್ಮಮಯಾದಿ ಪೂಜಿತ ನೀನು ಅದ್ವಿತೀಯನು
ಮೂರು ದೇಹ ಕಾಲಾತೀತನೆ ಸರ್ವ ಶಕ್ತ್ಯುತ ಗಣಪನೆ
ಪಂಚಭೂತವು ನೀನೆ ಆಗಿಹೆ ಮೂಲಾಧಾರದಿ ನಿಂತಿಹೆ
ನೀಲ ಗಗನದಿ ಸೂರ್ಯ ಚಂದ್ರರು ಸದಾ ಇರುವವರಂತೆಯೇ
ನಿನ್ನ ಮೇಲಿನ ನನ್ನ ಭಕ್ತಿಯು ಸದಾ ಇರಲೆಂದು ಬೇಡುವೆ"
namana gaNapatige tatvanaadavage
vishvadaNuvaNuva kartanige
poorNa brahmaaMDa dharisidaatanige
namanavidu laya kartanige
ella jeevigaLa aatmanaadavane
harasu nannaya harasutane
harasu ninnaya naama nuDivana
harasu smarisuta kELvana
harasu mooDaNadiMda nannaya
harasu dakShiNadiMdali
harasu paDuvaNadiMda nannaya
harasu uttaradiMdali
harasu gaNapane oordhvadishiyali
harasu adharada dishiyali
ella dikkugaLiMda nannane
rakShisO gaNaathane
neenu vaajmaya neenu chinmaya
neenu aanaMda pooranu
neenu brahmamayaadi poojita
neenu adviteeyanu
mooru dEha kaalaateetane
sarva shaktyuta gaNapane
paMchabhootavu neene aagihe
moolaadhaaradi niMtihe
neela gaganadi soorya chaMdraru
sadaa iruvavaraMteyE
ninna mElina nanna bhaktiyu
sadaa iraleMdu bEDuve"
Monday, October 25, 2004
Subscribe to:
Post Comments (Atom)
No comments:
Post a Comment