KannadaAudio.com Forum - tavaka:
ಅತ್ತಿತ್ತ ಅಲೆದಾಡುವ ಜಿಂಕೆಯಂತೆ
ನನ್ನ ಕಂಗಳು ಅರಸುತಿದ್ದರೂ
ತೆರೆಯಾಚೆ ಮರೆಯಾಗಿಹ ನೀನು
ಗಮನಿಸದೆ ಹೋದೆಯ .. ನನ್ನ ಕಂಗಳ ತವಕವ
ಚಾಮರಕೆ ಸಾಟಿಯಾಗಿ ಕಿವಿ ನಿಮಿರಿ
ಸವಿದನಿಯ ಕೇಳಲು ಹಾತೊರಿದಿದ್ದರೂ
ಮೆಲುದನಿಯಲೆ ನುಲುಗುತ್ತ ನೀನು
ಗಮನಿಸದೆ ಹೋದೆಯ .. ನನ್ನ ಕಿವಿಗಳ ತವಕವ
ಮಳೆಗಾಗಿ ಕಾತುರದಿ ಕಾಯುವ ಚಾತಕದಂತೆ
ನನ್ನ ಮನವು ನಿನ್ನ ಸೇರಲು ಹಾತೊರೆಯುತಿರಲು
ನಿನ್ನೊಳಗೆ ಮುಳುಗಿಹ ನೀನು
ಗಮನಿಸದೆ ಹೋದೆಯ .. ನನ್ನ ಮನದ ತವಕವ
ಶಮಿಸೆಯಾ ನೂರಾರು ತವಕವ ?
ನೀಗಿಸೆಯಾ ನೂರಾರು ಬಯಕೆಯ ?
ಕಾರ್ತಿಕ್ ..
ಅತ್ತಿತ್ತ ಅಲೆದಾಡುವ ಜಿಂಕೆಯಂತೆ
ನನ್ನ ಕಂಗಳು ಅರಸುತಿದ್ದರೂ
ತೆರೆಯಾಚೆ ಮರೆಯಾಗಿಹ ನೀನು
ಗಮನಿಸದೆ ಹೋದೆಯ .. ನನ್ನ ಕಂಗಳ ತವಕವ
ಚಾಮರಕೆ ಸಾಟಿಯಾಗಿ ಕಿವಿ ನಿಮಿರಿ
ಸವಿದನಿಯ ಕೇಳಲು ಹಾತೊರಿದಿದ್ದರೂ
ಮೆಲುದನಿಯಲೆ ನುಲುಗುತ್ತ ನೀನು
ಗಮನಿಸದೆ ಹೋದೆಯ .. ನನ್ನ ಕಿವಿಗಳ ತವಕವ
ಮಳೆಗಾಗಿ ಕಾತುರದಿ ಕಾಯುವ ಚಾತಕದಂತೆ
ನನ್ನ ಮನವು ನಿನ್ನ ಸೇರಲು ಹಾತೊರೆಯುತಿರಲು
ನಿನ್ನೊಳಗೆ ಮುಳುಗಿಹ ನೀನು
ಗಮನಿಸದೆ ಹೋದೆಯ .. ನನ್ನ ಮನದ ತವಕವ
ಶಮಿಸೆಯಾ ನೂರಾರು ತವಕವ ?
ನೀಗಿಸೆಯಾ ನೂರಾರು ಬಯಕೆಯ ?
ಕಾರ್ತಿಕ್ ..
1 comment:
nice one karthik
Post a Comment