ಮನೆಯಲ್ಲಿ ಸುಮಾರು ಅಪರೂಪದ ಪದಗಳನ್ನ ನಾವು ಉಪಯೋಗಿಸ್ತೀವಿ.. ಎಷ್ಟೋ ಸಲ ಅಂಥ ಪದಗಳಿದೆಯಾ ಅನ್ನೋ ಅಷ್ಟು ಆಶ್ಚರ್ಯ ಆಗತ್ತೆ.. ಕೆಲವು ಪದಗಳನ್ನ ಇಲ್ಲಿ ಪೋಸ್ಟಿಸ್ತೀನಿ.. ಅವುಗಳ ಸಾಂಧರ್ಭಿಕ ಅರ್ಥದೊಂದಿಗೆ. ಈ ರೀತಿ ಅಪರೂಪದ ಪದಗಳನ್ನು ನೀವೂ ಹೇಳಿ..
೧. ತಣುವು : ಥಂಡಿ ಇರುವಂಥಹ ಪದಾರ್ಥ. ತೀರ ಒದ್ದೆಯಿರುವುದಿಲ್ಲ, ಆದರೆ ಒಣಗಿರುವುದೂ ಇಲ್ಲ. ಉದಾ: ಬಟ್ಟೆಗಳು ಇನ್ನೂ ತಣುವಾಗಿದೆ
೨. ಬೋಸಿ : ಬಚ್ಚಲಮನೆಯಲ್ಲಿ ಉಪಯೋಗಿಸುವ ಚೊಂಬಿಗೆ ಬೋಸಿಯೆನ್ನುತ್ತಾರೆ.
೩. ಗೋಮ : ಊಟವಾದ ಮೇಲೆ ನೆಲವನ್ನ ಸ್ವಲ್ಪ ನೀರಿನಿಂದ ಶುಚಿಗೊಳಿಸುವ ಕೆಲಸ. ಉದಾ: ಗೋಮ ಬಳಿಯುವುದು. ಅಥವಾ ಗೋಮೆ ಹಚ್ಚು
೪. ಆರಿ ಅತ್ತಿಕಾಯಿ ಆಗಿದೆ: ಯಾವುದಾದರೂ ತಿನ್ನುವ ಪದಾರ್ಥ ತಯಾರಿಸಿ ತುಂಬಾ ಹೊತ್ತಾಗಿ ಆರಿ ಹೋಗಿದ್ದರೆ, ಆ ಸಂಧರ್ಭದಲ್ಲಿ ಉಪಯೋಗಿಸುತ್ತಾರೆ.
೫. ಒರಚ್ಚು: ಯಾವುದಾದರೂ ಪದಾರ್ಥ ಅದರ ಜಾಗದಲ್ಲಿ ಸರಿಯಾಗಿದ್ದರೆ, ಬೇರೆಯದರ ಜೊತೆ ಸೇರಿ ಅದರ ಮಹತ್ವ ಕಳೆದುಕೊಳ್ಳದಿದ್ದಾಗ, ಉಪಯೋಗಿಸುವುದು. ಉದಾ: ದೇವರ ಮನೆ ಒರಚ್ಚಾಗಿ ಇದೆ.
೬. ಸಾಟಿ: ಚಪಾತಿ ಮಾಡುವಾಗ ಸಣ್ಣದಾಗಿ ಲಟ್ಟಿಸಿ, ಒಳಗೆ ಎಣ್ಣೆ ಹಾಕಿ ತ್ರಿಕೋಣದ ರೀತಿ ಮಡಸುವ ವಿಧಾನ. ಉದಾ: ಚಪಾತಿಗೆ ಸಾಟಿ ಹಾಕು
Incidentally I was talking to Teju about the word "Goma/Gome" yesterday and I thought It was probably derived from the word ,"Gomaya" - to clean the floor with cow dung.....what say!
ReplyDeleteInteresting post!
hmm May be.. sounds similar .. Thanks for comments Kishan
ReplyDeleteEno karthik, ashTondella time ellinda sikto?
ReplyDeleteSakat interesting aagide ee post.
hmmm time is myth kano.. ide andre ide... illa andre illa
ReplyDelete