Thursday, July 08, 2004

sangaati

"sangaati

KannadaAudio.com Forum - sangaati:

ಹಸಿರೆಲೆಯು ಮರಕೆ ಜೊತೆ, ತಾರೆಗಳು ಸೋಮನಿಗೆ
ನಂಟುಂಟು ಭೋರ್ಗರೆವ ಸಾಗರಕೆ ಅಲೆಯ
ಗುಡಿಯ ನಂದಾದೀಪ, ಮೂರುತಿಗೆ ಸಂಗಡವು
ನನಗೆ ನೀ ನಿನಗೆ ನಾ ಸಂಗಾತಿ ಸತತ

ರಾಗ ಲಯ ಭಾವಗಳು ಸಂಗೀತದೊಡನಾಡಿ
ಮರಿದುಂಬಿ ನವಕುಸುಮಕದುವೆ ಜೊತೆಗಾರ
ಕಾಲ್ಗೆಜ್ಜೆ ಝಲ್ ನಾದ ನಾಟ್ಯಕದು ಸಂಗಮವು
ನನಗೆ ನೀ ನಿನಗೆ ನಾ ಸಂಗಾತಿ ಸತತ

ಚಿತ್ರಕಾರಗೆ ಮನದ ಕಲ್ಪನೆಯೆ ಸಾಕಲ್ಯ
ಕವಿಗೊಂದು ಸವಿಗನಸೆ ತನ್ನ ಜೀವಾಳ
ವಿಜ್ಞಾನಿಯ ಸಖಿತ್ವ ಜಿಜ್ಞಾಸೆಗಳ ಕೂಡ
ನನಗೆ ನೀ ನಿನಗೆ ನಾ ಸಂಗಾತಿ ಸತತ

ಶಿಶಿರದಲಿ ಎಲೆಯುದುರಿ ಬೋಳಾಗಬಹುದು ಮರ
ಸೋಮ ಕಣ್ಮರೆಯಾಗ್ವ ಅಮಾವಾಸ್ಯೆಯಲ್ಲಿ
ಸಾಗರನ ಗರ್ಭದಲಿ ಅಲೆಯದೆಲ್ಲಿನ ಸುಳಿವು
ವರುಣನಾರ್ಭಟದಿಂದ ನಂದೀತು ದೀಪ

ಸಿಹಿಯಿಲ್ಲದಾ ಕುಸುಮಕೆಲ್ಲಿಯಾ ಮರಿದುಂಬಿ
ಹಾಡಿನಲಿ ಆದೀತು ಸ್ವರ ತಾಳ ಲೋಪ
ಝ್ಹಲ್ ನಾದವಿಲ್ಲದೆಯೇ ನಾಟ್ಯವಾಡೀತು ನವಿಲು
ಏನಾದರೇನು ನೀ ನನ್ನ ಸಂಗಾತಿ

1 comment:

Anonymous said...

Very nice..Good Lines..