Friday, September 28, 2007

How far Fullness and Nullness

Zero, Null, Nothing, Vacuum -> where nothing can exist. Do you think such an entity is very far from Full, Complete, Everything ?


I have labeled this as a philosophical post and not any other, because, science talks about facts and ideas which can be argued with evidence. But this subject is little hypothetical and can not be proved with facts, hence I am trying to rely on philosophical inputs.

Lets take a shanti mantra from Vedas:

पूर्णमदः पूर्णमिदम् पूर्णात् पूर्ण्मुदच्यतॆ

पूर्णस्य पूर्णमादाय पूर्णमॆवावशिष्यतॆ

Meaning:

That (Brahman) is whole. This (Creation) is also whole.
From That Whole (i.e. Brahman Only), this whole has come out (Creation)But even though this whole has come, out of that whole, yet that whole remains whole only(i.e. Brahman remains unaffected. Retains His fullness and completeness.)


I have taken the above meaning from one of the books. The meaning of the above mantra looks very vague and confusing. But if calmly read, one can derive many truths from this mantra.
  1. Completeness of God: God is the one who created this world, or in other words this Whole world has been derived from God. As per our knowledge, this world is complete. So 'complete' has been derived from God who is again complete. But that does not affect Him.
  2. The line 'पूर्णस्य पूर्णमादाय पूर्णमॆवावशिष्यतॆ' is very curious. According to Arithmetic, if you subtract X from X, what remains is ZERO. But according to this mantra, if full is removed from full, what remains is again full. Mathematics can not answer this, because in Mathematics, Full is indeterminate. But if I equate Mantra with what Arithmatic has taught me, I can conclude, ZERO is FULL

Now, Lets us observe some of our day to day activities that shows similarities between Fullness and Nullness:

  1. At the end of session or a class, no questions will be asked by persons who completely understood it and who did not understand a bit of it.

  2. Old man behaves like a child. He becomes very sensitive, wants everyone's attention etc.

  3. Atheist and a Brahma Jnani, who understands real God, both behave in a very similar fashion. Atheist does not think about God; Brahma Jnani, understands that everything is God, he himself is God and he does not worry about God too much after that.
  4. Only two who are happy in this world are: The richest man and the poorest man. For the former, there is everything and he does not have to worry, for the later, there is nothing to worry about.
  5. Totally transparent object can become opaque in certain angle, due to Total internal reflection. So transparency and opaqueness are also not too far.
  6. We feel frustrated, if our brain nothing to do (Joblessness) or it is full of thoughts (Hectic Work)
  7. There is a saying in Kannada "ಅತಿಯಾದರೆ ಅಮೃತವೂ ವಿಷದಂತೆ": Meaning: Excess of Nector becomes poison
  8. Another saying "ಅತಿ ವಿನಯಂ ದೂರ್ತ ಲಕ್ಷಣಂ": Meaning: Too mild person will be cruel from other end

There are many more examples and experiences in the same line. Please share to prove that Fullness and Nullness are not too far..

Tuesday, September 04, 2007

ಶಂಕರಾಚಾರ್ಯ - ಅದ್ವೈತ

ಇದೇನಪ್ಪ ಇವನು, sudden ಆಗಿ, ಏನೇನೋ ಬರೀತಾ ಇದಾನೆ ಅಂದ್ಕೊಂಡ್ರ .. ಹೂ .. ನಮ್ಮಮ್ಮ ಆಧ್ಯಾತ್ಮ ಜೀವಿಗಳು .. ನಮ್ಮಮ್ಮ ಅವರ friends ಗೆ ಸೌಂದರ್ಯ ಲಹರಿ, ಶಿವಾನಂದ ಲಹರಿ, ಭಗವದ್ಗೀತೆ etc ಎಲ್ಲ ಹೇಳ್ಕೊಡ್ತಾರೆ. ಅವರ ಜೊತೆ ನಾನು ನನ್ನ ಪಾಮರ ಚರ್ಚೆ ಮಾಡ್ತಾ ಇರ್ತೀನಿ ಆಗಾಗ.. ಹೀಗೇ ಮೊನ್ನೆ ಭಾನ್ವಾರ ಆದ ಒಂದು ಚರ್ಚೆಯ ತುಣುಕು ಈ post.

ರಾತ್ರಿ ಎಲ್ಲಿಂದ್ಲೋ ಬರೋ ಅಷ್ಟ್ರಲ್ಲಿ ಸುಮಾರು ೧೧ ಘಂಟೆ ಆಗಿತ್ತು. ಈಗ ಅವ್ರ classನಲ್ಲಿ ಶಿವಾನಂದ ಲಹರಿ ಶುರು ಆಗಿದೆ. So, ನಾನು ಸುಮ್ನೆ ಆ ಪುಸ್ತಕ ತೆಗೆದು ಓದಕ್ಕೆ ಶುರು ಮಾಡಿದೆ. ನನಗೆ ಕೆಲವು doubts ಬಂತು .. ಹಾಗೆ ಚರ್ಚೆ ಶುರು ಆಯ್ತು.

ಹಿನ್ನೆಲೆ: ಶಿವಾನಂದ ಲಹರಿಯು ಈಶ್ವರನನ್ನು ಕುರಿತು ಶಂಕರ ಭಗವತ್ಪಾದರು ರಚಿಸಿರುವ ಉತ್ಕೃಷ್ಟವಾದ ಕೃತಿ. ಅದರಲ್ಲಿ ಶಿವನನ್ನು ಹೊಗಳುತ್ತಾ ಬೇರೆ ಇತರ ದೇವತೆಗಳಿಗಿಂತ ಶಿವ ಹೇಗೆ ಉನ್ನತ ಎಂದು ವಿವರಿಸ್ತಾರೆ. ಅಲ್ಲಿಂದಲೆ ನನ್ನ ಸಂದೇಹಗಳು ಶುರುವಾಯ್ತು. ನಿಮಗೆಲ್ಲ ತಿಳಿದಿರುವಂತೆ ಶಂಕರೇ ಅದ್ವೈತ ಸಿದ್ಧಾಂತವನ್ನು ಮಂಡಿಸಿದ್ದು. ನನ್ನ ಸಂದೇಹ ನಿಮ್ಮ ಮುಂದೆ ಇಡುವ ಮುಂಚೆ ಅದ್ವೈತದ basics ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ.

ಅದ್ವೈತದ ಪ್ರಕಾರ:

  1. ’ದೇವ’ನೊಬ್ಬ ನಾಮ ಹಲುವು - ಏಕಂ ಸದ್ವಿಪ್ರಾ ಬಹುಧಾ ವದಂತಿ
  2. ’ದೇವ’ನು ನಿರಾಕಾರ, ನಿರ್ವಿಕಾರ, ಅನಾದಿ, ಅನಂತ, ನಿರ್ವಣಿ, ನಿರ್ಭಾವ, ನಿಸ್ಸ್ವಭಾವ
  3. ಆತ್ಮ ಪರಮಾತ್ಮನ ಒಂದು ಭಾಗ - ಅಹಂ ಬ್ರಹ್ಮಾಸ್ಮಿ ಅನ್ನೋ ವಾದ
  4. ಪರಮಾತ್ಮ ನಮ್ಮೋಳಿಗಿರುವ ಅನುಭವ ಕೇವಲ ಜ್ಞಾನಯೋಗದಿಂದ ಬರುತ್ತದೆ
ಹೀಗೆಲ್ಲ ದೇವರ ಬಗ್ಗೆ ಮಂಡಿಸಿದ, ಶಂಕರರು - ಶಿವನೇ ಇತರ ದೇವತೆಗಳಿಗಿಂತ ಮಹಾಮಹಿಮನು ಅಂತ ಒಂದು ಶ್ಲೋಕದಲ್ಲಿ, ಶಿವನ ಆಕಾರವನ್ನು ಮತ್ತೊಂದು ಶ್ಲೋಕದಲ್ಲಿ ಇನ್ನೂ ಅನೇಕ ವಿಚಾಗಳನ್ನು ವಿವರಿಸುತ್ತಾರೆ.
.. ಏನು ಇಷ್ಟೊಂದು inconsistency ಅಂತ ನನ್ನ ಸಂದೇಹ ಶುರು ಆಯ್ತು. ಉದಾಹರಣೆ ಕೆಳಗಿನ ಶ್ಲೋಕ

ಆಕಾರವನ್ನು ವರ್ಣಿಸುತ್ತಾ:

ತ್ರಯೀ ವೇದ್ಯಂ ಹೃದ್ಯಂ ತ್ರಿಪುರಹರಮಾದ್ಯಂ ತ್ರಿನಯನಂ
ಜಟಾಭಾರೋದಾರಂ ಚಲದುರಗಹಾರಂ ಮೃಗಧರಮ್
ಮಹಾದೇವಂ ದೇವಂ ಮಯಿ ಸದಯಭಾವಂ ಪಶುಪತಿಂ
ಚಿದಾಲಂಬಂ ಸಾಂಬಂ ಶಿವಮತಿವಿಡಂಬಂ ಹೃದಿ ಭಜೆ

ಪರಮಾತ್ಮನಿಗೆ ಆಕಾರವಿಲ್ಲವೆಂಬ ಸತ್ಯ ಗೊತ್ತಿದ್ದರೂ ಶಂಕರರು ಈ ಮೇಲಿನ ಶ್ಲೋಕದಲ್ಲಿ ಆಕಾರದ ಬಗ್ಗೆ
ಅದೆಷ್ಟು ವರ್ಣಿಸಿದ್ದಾರೆ ಅಲ್ಲವೇ? ಏಕೆ ?

ಅದೇ ರೀತಿ ಶಿವನ ಔನ್ನತ್ಯವನ್ನು ವಿವರಿಸುತ್ತಾ:

ಸಹಸ್ರಂ ವರ್ತಂತೇ ಜಗತಿ ವಿಬುಧಾಃ ಕ್ಷುದ್ರಫಲದಾ
ನ ಮನ್ಯೆ ಸ್ವಪ್ನೇ ವಾ ತದನುಸರಣಂ ತತ್ಕೃತ ಫಲಮ್
ಹರಿಬ್ರಹ್ಮಾದೀನಾಮಪಿ ನಿಕಟಭಾಜಾಮಸುಲಭಂ
ಚಿರಂ ಯಾಚೆ ಶಂಭೋ ತವ ಪದಾಂಭೋಜ ಭಜನಂ

ಮೇಲಿನ ಶ್ಲೋಕದಲ್ಲಿ ಇತರ ದೇವತೆಗಳನ್ನು ಕ್ಷುದ್ರಫಲ ಕೊಡುವವರೆಂದು ಕರೆದಿದ್ದಾರೆ. ಅದ್ವೈತದ ಪ್ರಕಾರ, ಹರಿಹರಬ್ರಹ್ಮರೆಲ್ಲರೂ ಒಬ್ಬರೆ ಅಲ್ಲ್ವೆ? ಶಂಕರು ಈ ರೀತಿ ಹೇಗೆ ಬರೆಯಲು ಸಾಧ್ಯ ಅಂತಾನೆ ನನ್ನ ಮೂಢಮತಿಗೆ ತಿಳಿಯಲಿಲ್ಲ. ಅದಕ್ಕೆ ಅಮ್ಮ ಬಹಳ ಚೆನ್ನಾಗಿ ಪರಿಹಾರ ನೀಡಿದರು. ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುವ ಮುನ್ನ ನಿಮ್ಮ ಅಭಿಪ್ರಾಯ ?