Thursday, March 20, 2008

ನಾರಿ ನೀನಿಲ್ಲದಿರೆ ..

ಶಿಶಿರದಲಿ ಎಲೆಯುದುರಿ ಮರವು ಬೋಳಾದಂತೆ
ಬೇಸಿಗೆಯ ಬೇಗೆಯಲಿ ಕೆರೆ ಬತ್ತಿದಂತೆ
ಕರಿಯ ಕಾರ್ಮೋಡದಿಂ ರವಿಕಾಂತಿ ಕಳೆದಂತೆ
ನಾರಿ ನೀನಿಲ್ಲದಿರೆ ನಾ ಬೊಂಬೆಯಂತೆ | ಪ|

 

ತೈಲವಿದೆ ದೀಪವಿದೆ ಬತ್ತಿಯಿದೆ ಕತ್ತಲಿದೆ
ಜ್ವಾಲೆಯಿಲ್ಲದೆ ಕಾಂತೆ ಏನಾದರೇನು ?
ನೂರಾರು ಬಂಧುಗಳು ಹತ್ತಾರು ಬಳಗಗಳು
ನಾರಿ ನೀನಿಲ್ಲದಿರೆ ಯಾರಿದ್ದರೇನು ? |೧|

 

ಕೆಂಡವಿಲ್ಲದ ಹಂಡೆ ಗುಂಡಿಯಿಲ್ಲದ ಅಂಗಿ
ದಂಡವಿಲ್ಲದ ಸ್ವಾಮಿ ಸಾರ್ಥಕತೆಯೇನು ?
ಬರ ಬಡಿದ ಭೂಮಿಯಲಿ ಭತ್ತ ಬಿತ್ತಿದ ಹಾಗೆ
ನಾರಿ ನೀನಿಲ್ಲದೆದಿರೆ ಈ ಬಾಳು ಬರಿದು |೨|

 

ನನ್ನ ತಿಮ್ಮಿಗಾಗಿ ಈ ಕವನ ಮುಡಿಪು ....

Wednesday, March 19, 2008

Testing Uploading of images thru - Windows Live ..

Photos

From my archives: I had taken this shot in Dec-2004. I used to click a lot. Its been a long time I clicked. Batteries for camera had drained out. Today I bought 2200 mAh Panasonic batteries. I hope I can re-starting my shooting..

Windows Live - ಪ್ರಯತ್ನ..

ಇವತ್ತು ವಿಂಡೋಸ್ ಲೈವ್ ಇನ್ಸ್ಟಾಲ್ ಮಾಡಿಕೊಂಡೆ. ಅದರಲ್ಲಿ ಬ್ಲಾಗಿಸುವ ಪ್ರಯತ್ನವಿದು..