Saturday, July 31, 2004

DoLLu hoTTe gaNapa

KA ನಲ್ಲಿ ಹೊಸ ತಂತು ಶುರು ಆಯಿತು. ಒಂದು ಶೀರ್ಶಿಕೆ ಕೊಡುವಿದು. ಅದಕ್ಕೆಲ್ಲ ಪದ್ಯ, ಕವನ ಬರೆಯುವುದು. ಹೆಸರು ಉತ್ಸಾಹದಿ ಬರಿ...ಉಲ್ಲಾಸದಿ ನಲಿ. ಸುಬ್ಬು ಕೊಟ್ಟಿದ್ದು ಶೀರ್ಶಿಕೆ. ಚೆನ್ನಗಿದೆ.ನಾನು ಮೊದಲ ಶೀರ್ಶಿಕೆ ನೀಡಿದೆ. ಡೊಳ್ಳು ಹೊಟ್ಟೆ ಗಣಪ ಅಂತ .. ಅದಕ್ಕೆ ನನ್ನ ಪದ್ಯ ..

KA nalli hosa taMtu shuru aayitu. oMdu sheershike koDuvudu. adakkella padya, kavana bareyuvudu. hesaru utsAhadi bari...ullAsadi nali. subbu koTTiddu sheershike. chennaagide.naanu modala sheershike neeDide. DoLLu hoTTe gaNapa aMta .. adakke nanna padya ..

DoLLu hoTTe gaNapa

KannadaAudio.com Forum - View Single Post - utsAhadi bari...ullAsadi nali:

Image hosted by TinyPic.com

Friday, July 30, 2004

ಟ ಟಂ ಟ ಟಂ ಟಂ ಟ ಟ ಟಂ ಟ ಟಂ ಟಂ - Ta TaM Ta TaM TaM Ta Ta TaM Ta TaM TaM

ಕಾಳಿದಾಸನ ಸಮಯೋಚಿತ ಚಿಂತನೆ ಹಾಗು ಮೇಧಾ ಶಕ್ತಿಗೆ ಇನ್ನೊಂದು ಉದಾಹರಣೆ..
ಭೋಜರಾಜನ ಆಸ್ಥಾನದಲ್ಲಿ ಅನೇಕ ಮಹಾ ಕವಿಗಳಿರ್ತಾರೆ. ಭೋಜರಾಜನೂ ಸ್ವತಃ ಕವಿ ಆಗಿರ್ತಾನೆ.
ಒಮ್ಮೆ ಕಾಳಿದಾಸನಿಗೆ ಒಬ್ಬ ಕವಿ ಒಂದು ಸವಾಲೆಸಗುತ್ತಾನೆ. ಏನಪ್ಪ ಅಂದ್ರೆ ಒಂದು ಪದ್ಯ ಬರೀಬೆಕು.
ಅದರಲ್ಲಿ ಒಂದು ಸಾಲು ಪೂರ್ತಿ ಒಂದೆ ಅಕ್ಷರ ಬಳಸಬೇಕು ಅಂತ.. ಅದೇ ಸಮಯಕ್ಕೆ ರಾಜನ ಉಪ್ಪರಿಗೆಯ ಮೇಲೆ ನಡೆದು ಕೊಂಡು ಹೋಗುತ್ತಿದ್ದ ಲಲನೆಯ ಕೈಯಿಂದ ಒಂದು ಚಿನ್ನದ ಗಡಿಗೆ ( ತಂಬಿಗೆ ) ಕೆಳಗೆ ಬೀಳತ್ತೆ...
ಆಗ ಛಕ್ ಅಂತ ನಮ್ ಕವಿ ಬರೀತಾನೆ


ರಾಜ್ಯಾಭಿಷೇಕೇ ಮದವಿಹ್ವಲಾಯಾಃ
ಕರಾಚ್ಯುತೋ ಹೇಮ ಘಟಸ್ತರುಣ್ಯಃ
ಸೋಪಾನಮಾಸಾದ್ಯ ಚಕಾರ ಶಬ್ದಂ
ಟ ಟಂ ಟ ಟಂ ಟಂ ಟ ಟ ಟಂ ಟ ಟಂ ಟಂ


राज्याभिषॆकॆ मदविह्वलायाः
कराच्युतॊ हॆम घटस्तरुण्यः ।
सॊपानमासाद्य चकार शब्दं
ट टं ट टं टं ट ट टं ट टं टं ॥

ಅರ್ಥ: ರಾಜ ನ ಆಸ್ಥಾನದಲ್ಲಿ, ಮದವೇರಿದ ತರುಣಿಯೊಬ್ಬಳ ಕೈಯಿಂದ ಜಾರಿದ ಚಿನ್ನದ ಗಡಿಗೆ ಒಂದು, ಮೆಟ್ಟಿಲಿನ ಮೇಲೆ ಉರ್ಳಿದಾಗ, ಮೌನವನ್ನು ಮುರಿದು ಈ ರೀತಿ ಶಬ್ಧ ಉಂಟಾಯಿತು ..
ಟ ಟಮ್ ಟ ಟಂ ಟಂ ಟ ಟ ಟಂ ಟ ಟಂ ಟಂ


kaaLidaasana samayOchita chiMtane haagu mEdhA shaktige innoMdu udaaharaNe..
bhOjaraajana aasthAnadalli anEka mahaa kavigaLirtaare. bhOjaraajanoo svataH kavi aagirtaane. omme kALidaasanige obba kavi oMdu savaalesaguttAne. Enappa aMdre ondu padya bareebeku. adaralli ondu saalu poorti oMde akshara baLasabEku aMta.. adE samayakke raajana upparigeya mEle naDedu koMDu hOguttidda lalaneya kaiyiMda oMdu chinnada gaDige ( taMbige ) keLage beeLatte... aaga Cak aMta naM kavi bareetaane

raajyaabhiShEkE madavihvalaayaaH
karAchyutO hEma ghaTastaruNyaH
sOpAnamAsAdya chakAra shabdaM
Ta TaM Ta TaM TaM Ta Ta TaM Ta TaM TaM

artha: raaja na aasthAnadalli, madavErida taruNiyobbaLa kaiyinMda jaarida chinnada gaDige oMdu, meTTilina mEle urLidaaga, mounavannu muridu ee reeti shabdha uMTaayitu ..
Ta Tam Ta TaM TaM Ta Ta TaM Ta TaM TaM


Thursday, July 29, 2004

anAmika sArthavatI babhUva - अनामिका सार्थवती बभूव

ಭಾರತದಲ್ಲಿ ಉಂಗುರದ ಬೆರಳಿಗೆ ( ring finger) ಅನಾಮಿಕಾ ಅಂತ್ಲೂ ಕರೀತಾರೆ. ಅದಕ್ಕೆ ಒಂದು ಕಥೆ ನೆನಪಿಗೆ ಬಂತು.
ಭೋಜರಾಜನ ಆಸ್ಥಾನದಲ್ಲಿದ್ದ ಮಹಾಕವಿ, ಕವಿರತ್ನ ಕಾಳಿದಾಸನನ್ನು ಹೊಗಳುತ್ತ ಮತ್ತೊಬ್ಬ ಕವಿ ಬರೀತಾನೆ.

पुरा कवीनां गणना प्रसंगॆ अधिष्टिकाधिष्टित काळिदास ।
अद्यापि तत्तुल्य कवॆरभावात् अनामिका सार्थवती बभूव ॥
 
ಪುರಾ ಕವೀನಾಂ ಗಣನಾ ಪ್ರಸಂಗೇ ಅಧಿಷ್ಟಿಕಾಧಿಷ್ಟಿತ ಕಾಳಿದಾಸ
ಅದ್ಯಾಪಿ ತತ್ತುಲ್ಯ ಕವೇರಭಾವಾತ್ ಅನಾಮಿಕಾ ಸಾರ್ಥವತೀ ಬಭೂವ

ಅರ್ಥ:  ತುಂಬಾ ಹಿಂದೆ ಮಹಾ ಕವಿಗಳನ್ನ ಎಣಿಸುವುದಕ್ಕೆ ಶುರು ಮಾಡಿದ್ರಂತೆ.
ಕಿರುಬೆರಳಿನಿಂದ ಶುರು ಮಾಡಿ ಮೊದಲು ಕಾಳಿದಾಸ ಅಂತ ಶುರು ಮಾಡಿದ್ರಂತೆ.
ಮುಂದೆ ಅವನಿಗೆ ಹೋಲಿಸಬಲ್ಲ ಕವಿಗಳೇ ಸಿಗಲಿಲ್ಲವಾದ್ದರಿಂದ ಎರಡನೇ ಬೆರಳಾದ ಉಂಗುರದ ಬೆರಳು ಅನಾಮಿಕ ಅನ್ನುವ ಹೆಸರನ್ನು ಸಾರ್ಥಕ ಮಾಡಿಕೊಂಡಿತಂತೆ .. ಈ ರೀತಿ ಉತ್ಪ್ರೇಕ್ಷೆ ಕೊಡ್ತಾನೆ ಮತ್ತೊಬ್ಬ ಕವಿ.

 

BAratadalli uMgurada beraLige ( ring finer ) anAmikA aMtlU karItAre. adakke oMdu kathe nenapige baMtu.BOjarAjana AsthAnadallidda mahAkavi, kaviratna kALidAsanannu hogaLutta mattobba kavi barItAne.
 
purA kavInAM gaNanA prasaMgE adhiShTikAdhiShTita kALidAsa
adyApi tattulya kavEraBAvAt anAmikA sArthavatI baBUva
 
 
artha:  tuMbA hiMde mahA kavigaLanna eNisuvudakke Suru mADidraMte.
kiruberaLiniMda Suru mADi modalu kALidAsa aMta Suru mADidraMte.
muMde avanige hOlisaballa kavigaLE sigalillavAddariMda eraDanE beraLAda uMgurada beraLu anAmika annuva hesarannu sArthaka mADikoMDitaMte. I rIti utprEkShe koDtAne mattobba kavi.


Tuesday, July 27, 2004

shiKariNI - ಶಿಖರಿಣಿ

ಛಂದಸ್ಸುಗಳ ಬಗ್ಗೆ ಮಾತಾಡ್ತಾ ಮಾತಾಡ್ತಾ ಇನ್ನೊಂದು ಅತ್ಯುತ್ತಮ ಹಾಗೂ ಬಹಳ ಸುಂದರ  ಛಂದಸ್ಸು ನೆನಪಾಯ್ತು.
ಅದರ ಹೆಸರು ಶಿಖರಿಣೀ .  17 ಅಕ್ಷರಗಳ ಛಂದಸ್ಸಿದು. ಅದರ ಸೂತ್ರ

ರಸೈರುದ್ರಶ್ಚಿನ್ನಾ ಯಮನಸಬಲಾಗಃ ಶಿಖರಿಣೀ

 

ಈ ಛಂದಸ್ಸಿನಲ್ಲೇ ಜಗದ್ಗುರು ಶ್ರೀ ಶಂಕರರು ಸೌಂದರ್ಯಲಹರಿ ಬರೆದಿರುವುದು ಮತ್ತೊಂದು ವಿಶೇಷ.

 
ಖುಶಿ ಏನಪ್ಪ ಅಂದ್ರೆ, highschool ನಲ್ಲಿ ಕಲಿತದ್ದು ಇನ್ನೂ ನೆನಪಿದೆ ಅನ್ನೋದು..  ಶ್ರೀಧರ ಹೆಗ್ಗಡೆ ನಮ್ಮ ಸಂಸ್ಕೃತ ಮೇಷ್ಟ್ರು. ಬಹಳ ಒಳ್ಳೆ ಮೇಷ್ಟ್ರು. ಸ್ವಲ್ಪ ಕೋಪ ಜಾಸ್ತಿ ಅವರಿಗೆ..

class ನಲ್ಲಿ ಸಣ್ಣ ಪುಟ್ಟ test ಗಳಲ್ಲಿ ಸ್ವಲ್ಪ ಕಾಪಿ ಹೊಡೀತಿದ್ವಿ. ಈ ನಮ್ಮ ಮೇಷ್ಟ್ರು ಎಲ್ಲೆಲ್ಲೋ ನಿಂತ್ಕೊಂಡು ಗಮನಿಸಿಬಿಟ್ಟು, class ನಲ್ಲಿ ಎಲ್ಲರ ಮುಂದೆ ಸಕ್ಕತ್ತಾಗಿ ಅವಮಾನ ಮಾಡೋರು. ಒಂದು ಸಲ ನನಗೆ, indirect ಆಗಿ,

"ಕೆಲವರು ಬುದ್ಧಿವಂತರು ಅಂತ board ಹಾಕಿಕೊಂಡು copy ಹೊಡೀತಾರೆ" ಅಂತ ಹೇಳಿ ಮಾತಿನ ಚಾಟಿ ಏಟು ಕೊಟ್ಟಿದ್ರು. ಜೀವನ ಪೂರ್ತಿ ಮರೆಯಲ್ಲ..

 
CaMdassugaLa bagge mAtADtA mAtADtA innoMdu atyuttama hAgU bahaLa suMdara  CaMdassu nenapAytu.adara hesaru SiKariNI .  
17 akSharagaLa CaMdassidu. adara sUtra


rasairudraScinnA yamanasabalAgaH SiKariNI

I CaMdassinallE jagadguru SrI SaMkararu sauMdaryalahari barediruvudu mattoMdu viSESha. 

KuSi Enappa aMdre,  nalli kalitaddu innU nenapide annOdu..  SrIdhara heggaDe namma saMskRuta mEShTru. bahaLa oLLe mEShTru. svalpa kOpa jAsti avarige..
class nalli saNNa puTTa  test gaLalli svalpa copy hoDItidvi. I namma mEShTru ellellO niMtkoMDu gamanisibiTTu,  class nalli ellara muMde sakkattAgi avamAna mADOru.

oMdu sala nanage,  indeirect Agi,
"kelavaru buddhivaMtaru aMta  board hAkikoMDu  copy hoDItAre"

aMta hELi mAtina cATi ETu koTTidru. jIvana pUrti mareyalla..


Monday, July 26, 2004

ಶಾರ್ದೂಲ ವಿಕ್ರೀಡಿತ - SArdUla vikrIDita

Let me try to blog in my Language, Kannada. If you can not read it please scroll down for English script. But, if you dont know Kannada at all, :( I am sorry..  

ನೆನ್ನೆ ಸುಬ್ಬು ಜೊತೆ ಸಂಸ್ಕೃತದ ಛಂದಸ್ಗಳ ಬಗ್ಗೆ ಚರ್ಚೆ ಮಾಡ್ತ ಇದ್ದೆ. ನಿಜವಾಗ್ಲೂ high school ನಲ್ಲಿ ತುಂಬಾ ಆಸಕ್ತಿ ಇತ್ತು. ಇರೋ ಬರೋಎಲ್ಲಾ ಛಂದಸ್ಗಳನ್ನೂ ಕಂಠಪಾಠ ಮಾಡಿದ್ದೆ. ನನ್ನ ಜೊತೆಗೆ ಶ್ರೀನಂದ ಮತ್ತೆ ಅರವಿಂದ ಸಹ .. ಆಸಕ್ತರಾಗಿದ್ದರು. ನನ್ನ ಅಚ್ಚುಮೆಚ್ಚಿನ ಛಂದಸ್ಸು ಶಾರ್ದೂಲ ವಿಕ್ರೀಡಿತ. 19 ಅಕ್ಷರಗಳ ಈ ಛಂದಸ್ಸಿಗೆ ಒಳ್ಳೊಳ್ಳೆ ರಾಗಗಳನ್ನ ಹಾಕಬಹುದು. ನಮ್ಮ highschool ಪ್ರಾರ್ಥನೆ ಸಹ ಇದೇ ಛಂದಸ್ಸಿನಲ್ಲಿತ್ತು.

'ಯಂ ಬ್ರಹ್ಮಾ ವರುಣೇಂದ್ರ .... '.

ಅದರ ಸೂತ್ರ ಸಹ ಇನ್ನ ನೆನಪಿದೆ..
' ಸೂರ್ಯಾಶ್ವೈಮಸಜಾತಥಾಶ್ಚಗುರುವಃ ಶಾರ್ದೂಲ ವಿಕ್ರೀಡಿತಂ '
ಮೊದಲ ಅಕ್ಷರ ಗುರು. ಅದನ್ನ split ಮಾಡಿ ಎರಡು ಲಘು ಮಾಡಿದರೆ ಆ ಛಂದಸ್ಸಿನ ಹೆಸರು ಮತ್ತೇಭ ವಿಕ್ರೀಡಿತ. ಕನ್ನಡದ ಸೋಮೇಶ್ವರ ಶತಕ ಈ ಎರಡರmixture ನಲ್ಲಿದೆ. ನನ್ನ ಪ್ರಕಾರ ಛಂದಸ್ಸು ಒನ್ದು ಪದ್ಯದ, ಶ್ಲೋಕದ, ಕವನದ, ಕಾವ್ಯದ ಜೀವಾಳವಾಗಿದೆ. ಆದ್ದ್ರಿಂದಲೆ ವೇದದಲ್ಲೂ ಸಹ ಪ್ರತಿ ಮಂತ್ರದ ಮೊದಲು ಛಂದಸ್ಸನ್ನು ಹೇಳುತ್ತಾರೆ..

( Converted using Baraha Conversion Utility )
 
nenne subbu jote saMskrrtatada CaMdasgaLa bagge carce mADta idde. nijavAglU nalli tumbA Asakti ittu. irO barOellA CaMdasgaLannU kaMThapATha mADidde. nanna jotege SrInaMda matte araviMda saha .. AsaktarAgiddaru. nanna accumeccina CaMdassu SArdUla vikrIDita. akSharagaLa I CaMdassige oLLoLLe rAgagaLanna hAkabahudu. namma prArthane saha idE CaMdassinallittu.' yaM brahmA varuNEMdra .... '.adara sUtra saha inna nenapide..' sUryASvaimasajAtathAsaguruvaH SArdUla vikrIDitaM 'modala akSara guru. adanna mADi eraDu laGu mADidare A CaMdassina hesaru mattEBa vikrIDita. kannaDada sOmESvara Sataka I eraDaranallide. nanna prakAra CaMdassu ondu padyada, SlOkada, kavanada, kAvyada jIvALavAgide. AddriMdale vEdadallU saha prati maMtrada modaluCaMdassannu hELuttAre..Vintage Cars Superb


Convertible Vintage ? Posted by Hello
There were more than 100 Vintage cars from in and around Endicott or may be from
other places like Syracuse, NYC, Albany.  Amazingly they were all maintained.
Itseems its a yearly event.1930 Model Posted by Hello

1929 Model Posted by Hello

What a color Posted by Hello

Vintage Car Show Posted by Hello

Vitage Car Show on Washington Ave, Endicott on 24 July 2004 Posted by Hello

Friday, July 23, 2004

naanu nanna nenapu - ನಾನು ನನ್ನ ನೆನಪು

ನೆನಪು -- nenapu

KannadaAudio.com Forum - naanu nanna nenapu:


ನೆನಪು ..

ಪೂರ್ಣ ಚಂದಿರ ನಾಚುವಂತಹ ಕಂಜ ಮುಖದಾ ನೆನಪದು
ರವಿಗೆ ತುಲಿಸುವ ನಯನದಿಂ ಜಗ ಬೆಳಗೋ ಭಾಸದ ನೆನಪದು
ಬಳಿಗೆ ಬಂದೊಡೆ ರೋಮ ರೋಮಗಳೆಲ್ಲ ನಿಂತಾ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೧||

ಕಂಠ ಸುಮಧುರ, ಗಾನ ಕೋಗಿಲೆ ನಾಚಿ ನಿಂತಾ ನೆನಪದು
ಕಾಯ ವರ್ಣವ ಂಡು ನಿನ್ನಯ ಹೊನ್ನು ಸೋತಿಹ ನೆನಪದು
ಕರದ ಸ್ಪರ್ಶದಿ ಮನವ ಪುಳಕಿಸಿದೆಂತ ಸುಂದರ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೨||

ನವಿರು ರೇಶಿಮೆ ಮುಡಿಯ ವೇಣಿಗೆ ಸೋತು ಸೊರಗಿದ ನೆನಪದು
ಬಿಂಕ ವೈಯಾರದಿ ಮಯೂರಗೆ, ಸೊಕ್ಕು ಮುರಿದಾ ನೆನಪದು
ನನಿಹ ಕೂತಿರೆ, ಸವಿಯ ಮಾತಿಗೆ, ನನ್ನೆ ಮರೆತಾ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೩||

ತಾಯಿ ಪ್ರೀತಿಯ ಸಮಕೆ ಹೃದಯವ ಪೂರ್ಣ ತುಂಬಿದ ನೆನಪದು
ಕಠಿಣ ಕಾಲದೊಳೊಡನೆ ನಿಂತು ಸಖಿತ್ವ ನೀಡಿದ ನೆನಪದು
ಬಾಳ ಸಂಗತವೆಂದು ಕಟ್ಟಿದ ಸ್ವಪ್ನಗೋಪುರ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೪||

Friday, July 16, 2004

avaravara worry avaravarige !! ಅವರವರ ವರಿ ಅವರವರಿಗೆ

avaravara worry avaravarige ಅವರವರ ವರಿ ಅವರವರಿಗೆ

KannadaAudio.com Forum - avaravara worry avaravarige !!

vishEsha Enoo andre.. ee padyadalli 'ra' mattu 'va' aksharagaLE ati hecchu baLakeyaagive

haaagu ondE ondu ottaksharavilla..


ಅವರವರ worry ಅವರವರಿಗೆ ..

ಇರುವೆಗೆ ರವೆ ರವಾನಿಸುವ ವರಿ (worry), ರವೆಗೋ ಇರುವೆಯ ವರಿ
ವರವೀವ ರವಿಗೂ ಇರುಳಾವರಿಸುವ ವರಿ
ಕುವರಗೆ ಮಧುಸವರಿದಧರವ ವರಿಸುವ ವರಿ
ವರಿಸಿದ ವಧುವಿಗೂ ತರುವಾಯದ ವಿರಹದುರಿಯ ವರಿ
ಹರಿವ ’ರಿವರಿ’ ಗೆ ಸಾವಿರ ದೂರ ಹರಿವ ವರಿ
ಸಾವಿರದ (ಸಾವು ಇರದ) ರಣ ವೀರಗೂ ವೈರಿಯಿಂ ಬೆವರುವ ವರಿ
ಬರೆವ ಕವಿರಾಯಗೆ ಕುವರಿಯ ವರಣಿಸುವಾಗ ಉದರ ಮರೆಯುವ ವರಿ
ವೀರ ರಾವಣಗೂ ರಾಮದೇವರ ಶರ-ರವವೇ (ಬಾಣದ ಶಬ್ದ) ವರಿ
ಜನವರಿಯಿಂ ಜನವರಿಯ ವರೆಗೆ, ರವಿವಾರದಿಂ ರವಿವಾರದ ವರೆಗೆ
ಅವರಿವರಿವರವರಿಗವರವರದೇ ವರಿ ||

ಪರಿ ಪರಿ ವರಿಯಿಂ ನಿಮಗೆ ವರಿಯಾವರಿಸಿದರೆ,
ಐ ಆಮ್ ವೆರಿ ವೆರಿ ಸಾರಿ ...

ಕಾರ್ತಿಕ್ ..

Tuesday, July 13, 2004

Guru poornima

Guru poornima

KannadaAudio.com Forum - Guru poornima:
 snEhitare,

Ivattu ashaaDha huNNime.. andre gurupoornime. Ivattu naavellaru namm namma gurugaLige dakshiNe koDabEkaada divasa..

Ivattina dinavanna Vyasa PoorNima anta saha Bharatadalli aachiristaare. Veda Vyasaranna naavu gurooNaam guruh anta kareetivi.. iDee vishvakke bekaadantaha jnanavanna namma deshada vedagaLalli namma hiriyaru aDagisiTTiddaare.. antaha vEdagaLa vingaDane maaDida maha purusha Vyasa maharshi .. avarige ee dina nanna saashTaanga namanagaLu..

kalisidaatam varna maatram guru annuva samsriti nammadu... namma iDee jeevanadalli eshTo samayadalli anEka vishayagaLannu naavu nODi, mataaDi, kELi, gamanisi kalitirutteve.. aa ella gurugaLige ee sandharbhadalli nanna bhakti poorvaka namanagaLu..

Maneye modala paaTha shaale, guruve namma ammanu... namage ksheeraamruta uNisi, kannada modala akshara kaliside aa taayige ee dina kaaligeraguttene..

Bharatadalli naavu gurugaLige koDuva gaurava iDee vishvadalli yaaru tamma gurugaLige koDuvudilla. adE namma viSheshate... indu naavella namma namma gurugaLanna neneYoNa.. guruvina sthaanakke gaurava neeDona.. adE reeti nisvartha manasina gurugaLu hecchu hechchaagi mele barali endoo saha aashisuttene..

DhanyavadagaLondige"

Washington Photos


Shivu, Alred, Manji Kar Capturing Something

Jataka Bandi, so fancy Old pillar, Antique piece??

Flowers in Pathway White House, Not mine dont confuseWhite House Experiments ??White House Architects of that building behindaha.. looking someone?? Shiva


Kari Some Knitereally tired Blue BuildingEagle .. Scary pondResting on Pennsylvania Ave Penn AvePenn Ave Govt Offices


Alred What is thisShiva, Kari, Manji Watch Tower??Beside FBI FBIDept of Commerce Insurance Building, Not LICcolorful skies hmm... tough manAnother one Capitol HillCapitol Hill Manji, Karitoo many photographers Art GalleryBaltimore Inner Harbour
Posted by Hello