Sunday, May 18, 2008

ಬೇಗ ಬಾರೇ ನನ್ತಿಮ್ಮಿ

ನನ್ ಬಿಟ್ ಯಾಕೆ ದೂರ ಹೋದೆ, ನೀನೇ ಎಲ್ಲ ನನ್ತಿಮ್ಮಿ
ನೀನಿಲ್ದಂಗೆ ಬಡವಾಗೈತೆ, ಈ ನನ್ ಜೀವ ನನ್ತಿಮ್ಮಿ
ಹೋಗಿದ್ದೊಂದೇ ತಿಂಗಳ್ಗಾದ್ರೂ, ವರ್ಸಾಂಗೈತೆ ನನ್ತಿಮ್ಮಿ
ನಿಂತೋಗೈತೆ ಗಡ್ಯಾರದ್ ಮುಳ್ಳ, ಬೇಗ ಬಾರೇ ನನ್ತಿಮ್ಮಿ

 

ಊಟ ಹತ್ತಕ್ಕಿಲ್ಲ ಮೈಗೆ, ನಿದ್ದೆ ಬಾರಕ್ಕಿಲ್ಲಾ ಕಣ್ಗೆ
ಕೆಲ್ಸ್ದಾಗಂತೂ ಮನ್ಸೇ ಇಲ್ಲ, ನೀನಿಲ್ದಂಗೆ ನನ್ತಿಮ್ಮಿ
ಮನ್ಯಾಗೆಲ್ಲಾ ಉಮ್ಮಸ್ ಇಲ್ಲ, ಮನ್ದಾಗ್ ಲವ್ ಲವ್ಕೇನೇ ಇಲ್ಲ
ಅಗ್ಲೂ ರಾತ್ರೆ ಬ್ಯಾಸ್ರಾ ಎಲ್ಲ, ಬರ್ಬಾರ್ದೇನೇ ನನ್ತಿಮ್ಮಿ

 

ಸ್ಯಾಂಡ್ ವಿಚ್ನೋನ್ಗೆ ಕೆಲ್ಸಾ ಇಲ್ಲ, ಗೋಲ್ಗೊಪ್ನೋನ್ಗೆ ಗಿರಾಕಿ ಇಲ್ಲ
ಚುರ್ ಮುರಿ ಗಾಡಿ ಕಾಣಕ್ಕಿಲ್ಲ, ನೀನಿಲ್ದಂಗೆ ನನ್ತಿಮ್ಮಿ
ಗೋಕುಲ್ ವೆಜ್ ಗೇ ಬಾಗ್ಲೇ ಗತಿ, ಅಡಿಗಾಸ್ ಗೇ ಎತ್ತಂಗಡಿ
ಐಸ್ ಕ್ರೀಮ್ ನೋನ್ಗೆ ಯಾಪಾರ ಇಲ್ಲ, ಬೇಗ ಬಾರೇ ನನ್ತಿಮ್ಮಿ

 

ಆಗ್ಲೇ ಆಯ್ತು ಅದ್ನೆಂಟ್ ದಿವ್ಸ, ಆದಂಗೈತೆ ಅದ್ನೆಂಟ್ ವರ್ಸ
ಎತ್ಕೊಂಡ್ ಕುಣ್ದಾತೀನಿ ನಿನ್ನ, ನೀನ್ ಬಂದ್ ಮ್ಯಾಕೆ ನನ್ತಿಮ್ಮಿ
ಇನ್ನೇನ್ ಬಂದೀಯಲ್ಲೇ ಅಂಥ, ಆಕಾಸ್ದಾಗೆ ತೇಲ್ಕೊಂಡಿವ್ನಿ
ಬೇಗ ಬಾರೆ ಬೇಗ ಬಾರೆ, ಬರ್ಬಾರ್ದೇನೆ ನನ್ತಿಮ್ಮಿ

 

My dear Thimmi, has gone to Tampere, Finland for a month for attending a training. She went Apr 30th and will be back on May 30th. I am missing her a lot and this poem is dedicated to her and asking her to come as early as possible.

Map image

Tampere on Google Maps