ನೆನಪು -- nenapuKannadaAudio.com Forum - naanu nanna nenapu: ನೆನಪು ..
ಪೂರ್ಣ ಚಂದಿರ ನಾಚುವಂತಹ ಕಂಜ ಮುಖದಾ ನೆನಪದು
ರವಿಗೆ ತುಲಿಸುವ ನಯನದಿಂ ಜಗ ಬೆಳಗೋ ಭಾಸದ ನೆನಪದು
ಬಳಿಗೆ ಬಂದೊಡೆ ರೋಮ ರೋಮಗಳೆಲ್ಲ ನಿಂತಾ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೧||
ಕಂಠ ಸುಮಧುರ, ಗಾನ ಕೋಗಿಲೆ ನಾಚಿ ನಿಂತಾ ನೆನಪದು
ಕಾಯ ವರ್ಣವ ಂಡು ನಿನ್ನಯ ಹೊನ್ನು ಸೋತಿಹ ನೆನಪದು
ಕರದ ಸ್ಪರ್ಶದಿ ಮನವ ಪುಳಕಿಸಿದೆಂತ ಸುಂದರ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೨||
ನವಿರು ರೇಶಿಮೆ ಮುಡಿಯ ವೇಣಿಗೆ ಸೋತು ಸೊರಗಿದ ನೆನಪದು
ಬಿಂಕ ವೈಯಾರದಿ ಮಯೂರಗೆ, ಸೊಕ್ಕು ಮುರಿದಾ ನೆನಪದು
ನನಿಹ ಕೂತಿರೆ, ಸವಿಯ ಮಾತಿಗೆ, ನನ್ನೆ ಮರೆತಾ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೩||
ತಾಯಿ ಪ್ರೀತಿಯ ಸಮಕೆ ಹೃದಯವ ಪೂರ್ಣ ತುಂಬಿದ ನೆನಪದು
ಕಠಿಣ ಕಾಲದೊಳೊಡನೆ ನಿಂತು ಸಖಿತ್ವ ನೀಡಿದ ನೆನಪದು
ಬಾಳ ಸಂಗತವೆಂದು ಕಟ್ಟಿದ ಸ್ವಪ್ನಗೋಪುರ ನೆನಪದು
ನೆನಪು ಸಾವಿರ ಬಾಳ ಯಾನಕೆ ಅದುವೆ ಇಂಧನ ಕರಕದು ||೪||