tuMbaa dinagaLa naMtara oMdu kavana barede... Sowmya ge samarpita
ಏನು ಬರೆಯಲಿ, ಎಂತು ಹೊಗಳಲಿ?
ಹೇಗೆ ಅಂದವ ಹಾಡಲಿ ?
ನಿನ್ನ ಚಂದವ ವರ್ಣಿಸಲು ನಾ
ಯಾವ ಭಾಷೆಯ ಬಳಸಲಿ ?
ಹೋಲಿಸಲು ನಾ ನಿನ್ನ ಕಂಗಳ
ಯಾವ ತಾರೆಯು ಸಮವಿದೆ ?
ಮುಗ್ಧ ನಗುವಿಗೆ ಯಾವ ಮಗುವದು
ಸಾಟಿಯಾಗಲು ಸರಿಯಿದೆ ?
ವಿಶಾಲ ಹೃದಯವ ಕಂಡು ಸಾಗರ
ಬತ್ತಿ ಹೋಗದೆ ಇರುವುದೆ ?
ಬಿಂಕ ವೈಯ್ಯಾರಗಳ ಕಾಣುತ
ಸರಿತೆ ಮತ್ಸರ ತಾಳದೆ ?
ನಿನ್ನ ಹೃದಯವು ನನ್ನಲಿರಲು
ಯಾವ ಸುಖವನು ಬಯಸಲಿ ?
ನೀನೆ ನನ್ನಯ ಜೊತೆಗೆ ಬಾಳಲು
ಯಾವ ಭಾಗ್ಯವ ಬೇಡಲಿ ?
ಏನು ಬರೆಯಲಿ, ಎಂತು ಹೊಗಳಲಿ?
ಹೇಗೆ ಅಂದವ ಹಾಡಲಿ ?
ನಿನ್ನ ಚಂದವ ವರ್ಣಿಸಲು ನಾ
ಯಾವ ಭಾಷೆಯ ಬಳಸಲಿ ?
ಹೋಲಿಸಲು ನಾ ನಿನ್ನ ಕಂಗಳ
ಯಾವ ತಾರೆಯು ಸಮವಿದೆ ?
ಮುಗ್ಧ ನಗುವಿಗೆ ಯಾವ ಮಗುವದು
ಸಾಟಿಯಾಗಲು ಸರಿಯಿದೆ ?
ವಿಶಾಲ ಹೃದಯವ ಕಂಡು ಸಾಗರ
ಬತ್ತಿ ಹೋಗದೆ ಇರುವುದೆ ?
ಬಿಂಕ ವೈಯ್ಯಾರಗಳ ಕಾಣುತ
ಸರಿತೆ ಮತ್ಸರ ತಾಳದೆ ?
ನಿನ್ನ ಹೃದಯವು ನನ್ನಲಿರಲು
ಯಾವ ಸುಖವನು ಬಯಸಲಿ ?
ನೀನೆ ನನ್ನಯ ಜೊತೆಗೆ ಬಾಳಲು
ಯಾವ ಭಾಗ್ಯವ ಬೇಡಲಿ ?
11 comments:
thumba chennagidhe kano karthik. nijvaglu..I replied to it...in the KA forum also...:-)
maduveya ee bandha, anuragada anubhanda...
I have a few things to say, but well.... sometime later in life maybe...
YeLeLu, janumadalu, teerada sambhandha...
-A good friend
guruuuu...
aDDbidde... man.. I have been reading your blog since a long time..
the poems are too good..But this one really takes the cake ! Awesome kaNo Karthik.
anaamadheya
anaamadheya andre hege gottagbeku nange?? yaaru anta hELbaarde ??
vishaala hridayava kaMDu saagara
batti hOgade iruvude ?
biMka vaiyyaaragaLa kaaNuta
sarite matsara taaLade ?
ee saals tumba ishTavaitu :)
enidu soumya effect.aa??
*thumbsup*
yaarappa idu hosa anamadheya?
hosa anamadheya andre :-? haLaba bere idaana ?
*eee* enilla haage fishing for results.. yaaradru siktaara aMta *mugdha*
olle kavithe thumba dinagalaadmele hodtha idini...especially the lines
biMka vaiyyaaragaLa kaaNuta
sarite matsara taaLade ?
Sakkatthagi ide Karthik...
sogasaada kalpane...
its so nice krathik..... keep it up man
Post a Comment