Tuesday, October 26, 2004

KannadaAudio.com Forum - DhruDha saMkalpa


KannadaAudio.com Forum - DhruDha saMkalpa





















ದೃಢ ಸಂಕಲ್ಪ

ಗಂಡನೊಮ್ಮೆ ತನ್ ಕಲ್ಲು ಹೊಟ್ಟ್ಯನ್ನು ಸವರುತ
ಸತಿ ಸುತರಿಗೆ ಕೇಳುವಂತೆ ದೃಢ ಸಂಕಲ್ಪವ ಮಾಡಿದ, ದೃಢ ಸಂಕಲ್ಪವ ಮಾಡಿದ
ಪ್ರತಿನಿತ್ಯವೂ ಯೋಗಾಸನ ಪಥ್ಯ ಗಿಥ್ಯ ಮಾಡುತ
ಗ್ಯಾರಂಟೀ ಕರಗಿಸುವೆನು ಬೃಹತ್ ಜಠರ ಕಾಯವ, ಬೃಹತ್ ಜಠರ ಕಾಯವ

ಒಗ್ಗರಣೆಯ ಸಾಸಿವೆಯದು ಚಿಟಚಿಟ ಕಲರವಿಸುತೆ
ಕ್ಷಣಮಾತ್ರದಿ ಶಬ್ದವೆಲ್ಲ ಸ್ತಬ್ಧವಾಯ್ತು ನೋಡುತೆ
ಬೇಳೆ ಸುರಿದು ಸತಿಯು ಒಗ್ಗರಣೆಗೆ ಹನಾದಳು ಮಸಿಯುತ
ಪತಿದೇವನ ಸಂಕಲ್ಪವೂ ಸಾಸಿವೆಯಂತೆ ಚಿಟ ಚಿಟ

TVಯಲ್ಲಿ Tom&Jerry ನೋಡುತಿದ್ದ ಬಾಲಕ
Tom ಬೆಕ್ಕದು Jerry ಹಿಡಿಯಲು ಸಂಕಲ್ಪವ ಮಾಡುತ
ಶತ ಶತ ಪ್ರಯತ್ನ ಮಾಡಿ Tom ಸೋತಿತು ಸೊರಗುತ
ನೋಡುತಿದ್ದ ಮುಗ್ಧ ಬಾಲ ಉರುಳಿ ಉರುಳಿ ನಲಿಯುತ

ಕೋಣೆಯೊಳಗಿ ಚಾಪೆ ಹಾಸಿ ಯೋಗಕೆಂದು ಸಿದ್ಧನಾಗಿ
ಕೋಣೆ ಕದವ ಮುಂದೆ ಮಾಡಿ ಶುರು ಮಾಡಿದ ಗಂಡನು
ಅರ್ಧ ಗಂಟೆ ಬಳಿಕ ಸುತನು ಕದದ ಸಂದಿಯಲ್ಲಿ ಇಣುಕಿ
ಗೊರಕೆ ಕೇಳಿ ಒಳಗೆ ಹೋಗಿ ಅಪ್ಪಗೆ ಹೀಗೆಂದನು

ಅಪ್ಪ ಅಪ್ಪ ಏನು ಮಾಡುತಿರುವೆ ಚಾಪೆ ಮೇಲೆ ಮಲಗಿ
ಇದರ ಹೆಸರು ಶವಾಸನವು ನಿನಗೆ ಅರ್ಥವಾಗದೆಂದು
ಇಷ್ಟರಲ್ಲೆ ಮಡದಿ ತಂದ ತಟ್ಟೆ ತುಂಬ ದೋಸೆ ತಿಂದ
ಸಾರ್ಥಕತೆಯ ಭಾವದಿಂದ ಕೆಲಸಕೆಂದು ಹೊರಟು ನಿಂತ

ಕಾರ್ತಿಕ್..




1 comment:

Narendra Kumar said...

I don't have the fonts and I am not able to read thes "kavana" in kannada.
But, the songs on the home page, I could read.....may be they are in gif format.
I tried to read few of them in "English Lipi"....it is very difficult!!

Here all of us work on Solaris OS. We don't have MS-Windows. All the kannada fonts have been written for Windows only.:-( Let me know of any kannada fonts for Solaris.

I liked the look and feel of your site.
Did you create the HTML page yourself or the blogspot provides some templates for this?

-Narendra