Tuesday, August 21, 2007

ಹಬ್ಬಗಳ ಸಾಲು - ಶ್ರಾವಣ

ನಮ್ಮ ದೇಶದ ಸಂಸ್ಕೃತಿಯಲ್ಲಿ ಹಬ್ಬಗಳ ವಿಶೇಷತೆ ಬಹಳ ಇದೆ. ನಮ್ಮ ಪೂರ್ವಜರು ಮಾಡಿರುವ ಪರಂಪರೆಗಳು ಹಬ್ಬಗಳ ಆಚರಣೆಗಳು ಬಹಳ ಸೂಕ್ತವಾಗಿವೆ. ನಮ್ಮಲ್ಲಿ ಪ್ರತಿದಿನವೂ ಹಬ್ಬದಂತೆ, ಅದರಲ್ಲೂ ಶ್ರಾವಣ ಮಾಸ ಬಂತೆಂದರೆ ಸಾಕು, ಹಬ್ಬಗಳೋ ಹಬ್ಬಗಳು. ಹಾಗೆ ನೋಡಿದರೆ ಶ್ರಾವಣದ ಪ್ರತಿದಿನವೂ ಹಬ್ಬಗಳೇ..

ಶ್ರಾವಣ ಮಾಸದ ಹಬ್ಬಗಳ ಪರಿಚಯ ಹಾಗು ವಿವರಣೆ ಈ post ನ ಉದ್ದೇಶ.

ಹಬ್ಬಗಳ ಸಾಲು:
 1. ಭೀಮನ ಅಮಾವಾಸ್ಯೆ - ಆಶಾಢ ಅಮಾವಾಸ್ಯೆ
  ಈ ಹಬ್ಬವನ್ನು ಮದುವೆಯಾಗದ ಹೆಣ್ಣುಮಕ್ಕಳು ಒಳ್ಳೆ ಗಂಡ ಸಿಗಲಿ ಎನ್ನುವ ಉದ್ದೇಶದಿಂದ ಆಚರಿಸುತ್ತಾರೆ. ಜ್ಯೋತಿರ್ಭೀಮೇಶ್ವರ ಈ ದಿನದ ಆರಾಧ್ಯ ದೈವ. ಭೀಮನ ಹಾಗಿರಲಿ ತನ್ನ ಗಂಡ ಅನ್ನೋ ಉದ್ದೇಶವಿರಬೇಕು. ಮದುವೆಯಾದ ಹೆಂಗಸರೂ ಕೂಡ ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ಈ ಪೂಜೆ ಮಾಡುತ್ತಾರೆ. ಅಷ್ಟಕ್ಕೇ ಸೀಮಿತವಲ್ಲದ ಈ ಹಬ್ಬದಲ್ಲಿ ಸೋದರಿಯರು ಸೋದರರ ಕೈಯಿಂದ ಭಂಡಾರ ಒಡೆಸುತ್ತಾರೆ. ಭಂಡಾರ ಅಂದರೆ, ಕರಿದ ಕಡುಬು, ಆದರೆ ಅದರೊಳಗೆ ಲಕ್ಷ್ಮೀ ಸ್ವರೂಪಿ ನಾಣ್ಯವನ್ನು ಇಟ್ಟು ಕರೆದಿರುತ್ತಾರೆ. ಅಂತಹ ಕಡುಬನ್ನು ಮುಂಬಾಗಿಲ ಹೊಸಿಲಲ್ಲಿಟ್ಟು ಸೋದರ ಹೊಸಿಲ ಮೇಲೆ ಕೂತು ತನ್ನ ಮೊಣಕೈಯಿಂದ ಅದನ್ನು ತುಂಡರಿಸುತ್ತಾನೆ. ತನ್ನ ಸೋದರಿಯನ್ನು ರಕ್ಷಣೆ ಮಾಡುತ್ತೇನೆಂಬ ಸಂಕೇತ
 2. ಮಂಗಳ ಗೌರಿ - ಶ್ರಾವಣ ಐದು ಮಂಗಳವಾರಗಳು
  ಮದುವೆಯಾದ ಹೆಂಗಸರು ಮದುವೆಯಾದಾಗಿಂದ ಐದು ವರ್ಷಗಳು ಈ ವ್ರತವನ್ನು ಆಚರಿಸುತ್ತಾರೆ. ಬೆಳಗ್ಗೆ ಎದ್ದು ಶುಭ್ರರಾಗಿ ಗೌರಿ ದೇವತೆಯನ್ನು ಪ್ರತಿಷ್ಠಾಪಿಸಿತ್ತಾರೆ. ಐದು ಅರಿಶಿಣದ ಗೌರಿಯನ್ನು ಮಾಡಿ ಅದಕ್ಕೆ ಪೂಜೆ ಮಾಡುತ್ತಾರೆ. ಎರಡು ಕಡೆ ಹದಿನಾರು ವೀಳ್ಯದೆಲೆಯ ಮೇಲೆ ಕೊಬ್ಬರಿ ಇಟ್ಟು ಅದರೊಳಗೆ ಹದಿನಾರು ಬಟ್ಟಲಡಕೆ ಇಡುತ್ತಾರೆ. ಅದರ ಮೇಲೆ ಒಂದೊಂದು ಅಚ್ಚು ಬೆಲ್ಲ ಇಡುತ್ತಾರೆ. ಹದಿನಾರು ತಂಬಿಟ್ಟಿನ (ಗೋಧಿಯಿಂದ ಮಾಡಿದ ವಿಶೇಷ ತಿನಿಸು) ದೀಪವನ್ನು ಮಾಡಿ, ತುಪ್ಪದ ಬತ್ತಿ ನೆನೆಸಿ ಹಚ್ಚುತ್ತಾರೆ. ಮಂಗಳ ಗೌರಿ ಕಥೆಯನ್ನು ಓದುವಾಗ ಒಂದು ಮೊಗೊಚೋ ಕೈಯ್ಯನ್ನು ಆ ಉರಿಯುವ ದೀಪದ ಮೇಲಿರಿಸಿ ಕಪ್ಪಾಗಿಸುತ್ತಾರೆ. ಈಸಮಯದಲ್ಲಿ ಇತರ ಯಾರಾದರೂ ಹೆಂಗಸರು ಈಕೆಯ ಜಡೆ ಹೆಣೆಯುತ್ತಾರೆ. ಕಪ್ಪನ್ನು ದೇವಿಗೆ ಕಣ್ಣು ಕಪ್ಪಿನಂತೆ ಅಲಂಕರಿಸುತ್ತಾರೆ. ಕಡೆಗೆ ತಾವೂ ಅದರಿಂದ ಅಲಂಕಾರ ಮಾಡಿಕೊಳ್ಳುತ್ತಾರೆ. ಐದು ಜನ ಮುತ್ತೈದೆಯರಿಗೆ ತಾಂಬೂಲ ಕೊಡುತ್ತಾರೆ. ಈ ಸಂಬಂಧ ಕೆಲವು photoಗಳು

 3. ನಾಗರ ಪಂಚಮಿ - ಶ್ರಾವಣ ಶುಕ್ಲ ಪಂಚಮಿ
  ಇದೂ ಸಹ ಸೋದರ ಸೋದರಿಯರ ಹಬ್ಬ. ಸೋದರಿ ತನ್ನ ಸೋದರನನ್ನು ಮನೆಗೆ ಕರೆದು, ಉಣಬಡಿಸಿ, ಬೆನ್ನು ತೊಳೆದು ಉಡುಗೊರೆ ಕೊಟ್ಟು ಕಳುಹಿಸುತ್ತಾಳೆ. ಬೆನ್ನು ತೊಳೆಯೋದು ಅನ್ದ್ರೆ, ಒಂದು ಹೂವಿಂದ ಹಾಲನ್ನು ಬೆನ್ನಿಗೆ ಸವರಿ ತೊಳೆಯುವುದು. ನಂತರ ನೀರಿನಿಂದ ಸವರುವುದು. ಸೋದರಿಯರ ರಕ್ಷಣೆ ಸೋದರರ ಜವಾಬ್ದಾರಿ ಅನ್ನೋ ಸಂಕೇತ. ಬೆನ್ನು ತೊಳೆಯೋ ಹಬ್ಬ ಅಂತಾನೂ ಕರೀತಾರೆ. ಮನೆ ಮುಂದೆ ತುಳಸಿ ಕಟ್ಟೆ ಹತ್ರ ನಗರನ ಚಿತ್ರ ಬಿಡಿಸಿ ಅದಿಕ್ಕೂ ಸಹ ಪೂಜೆ ಮಾಡ್ತಾರೆ. ಹಾಗೆ, ಮನೆ ಮುಂಬಾಗಿಲಿನ ಪಕ್ಕದಲ್ಲೂ ನಾಗರವನ್ನು ಬರೆದು ಪೂಜೆ ಮಾಡುತ್ತಾರೆ. ದೇವರ ಮನೆಯಲ್ಲಿ ಹುತ್ತದ ಮಣ್ಣಿಟ್ಟು ಅದರ ಮೇಲೆ ಬೆಳ್ಳಿ ನಾಗಪ್ಪನನ್ನು ಕೂರಿಸಿ ಹಾಲು, ನೀರೆರೆಯುತ್ತಾರೆ. ಅಕ್ಕಿ ಹಿಟ್ಟು, ಚಿಗಳಿ ತಂಬಿಟ್ಟು, ಕಡಲೇ ಕಾಳು ನೈವೇದ್ಯ ಮಾಡುತ್ತಾರೆ. ಅಂದು ಮನೆಯಲ್ಲಿ ಶಾವಿಗೆ ಅಡುಗೆ ಮಾಡುವ ಹಾಗಿಲ್ಲ. ಬಟ್ಟೆ ಹೊಲೆಯುವ ಹಾಗಿಲ್ಲ. ಮತ್ತೆ ನಾಗರನಿಗೆ ಅಕ್ಷತೆಯಿಂದ ಪೂಜೆ ಇಲ್ಲ. ಅವನಿಗೆ ನೋವಾಗುತ್ತದೆ ಎಂಬ ನಂಬಿಕೆ.

  ಬೆನ್ನು ತೊಳೆಯುವ ಶಾಸ್ತ್ರದ ಒಂದು photo:

  ಸದ್ಯಕ್ಕೆ ಸಾಕಾಯ್ತು .. ಮತ್ತೆ ಬರೀತೀನಿ .. ಉಳಿದ ಹಬ್ಬಗಳನ್ನು ಸುಮ್ನೆ ಪಟ್ಟಿ ಮಾಡ್ತೀನಿ..
 4. ಸಿರಿಯಾಳ ಷಷ್ಠಿ - ಶ್ರಾವಣ ಶುಕ್ಲ ಷಷ್ಠಿ

 5. ವರಮಹಾಲಕ್ಷ್ಮಿ - ಶ್ರಾವಣ ಮಾಸದ ಎರಡನೇ ಶುಕ್ರವಾರ

 6. ಉಪಾಕರ್ಮ - ಶ್ರಾವಣ ಶುಕ್ಲ ಚತುರ್ದಶಿ/ಪೂರ್ಣಿಮಾ

 7. ರಕ್ಷಾಬಂಧನ - ಶ್ರಾವಣ ಪೂರ್ಣಿಮಾ

 8. ಅನಂತ ಚತುರ್ದಶಿ - ಶ್ರಾವಣ ಕೃಷ್ಣ ಚತುರ್ದಶಿ

 9. ಶ್ರಾವಣ ಶನಿವಾರ - ಶ್ರಾವಣದ ಪ್ರತಿ ಶನಿವಾರ

 10. ಸಂಪತ್ ಶುಕ್ರವಾರ - ಶ್ರಾವಣದ ಶುಕ್ರವಾರ

 11. ಗೋಕುಲಾಷ್ಟಮಿ - ಶ್ರಾವಣ ಕೃಷ್ಣ ಅಷ್ಟಮಿ

 12. ರಾಘವೇಂದ್ರ ಸ್ವಾಮಿಗಳು ಆರಾಧನೆ -

 13. ಋಷಿ ಪಂಚಮಿ - ಶ್ರಾವಣ ಕೃಷ್ಣ ಪಂಚಮಿ

ಇನ್ನೂ ಸಾಕಷ್ಟು ಹಬ್ಬಗಳು ಇವೆ.. ನನ್ನ ಪರಿಮಿತ ಬುದ್ಧಿಗೆ ತಿಳಿದಿದ್ದನ್ನು ಗೀಚಿದ್ದೇನೆ. ನಿಮಗೇನಾದರೂ ಇನ್ನೂ ತಿಳಿದರೆ ಹೇಳಿ update ಮಾಡ್ತೀನಿ..

5 comments:

Sri said...

List hege goottaythu? Good one.

ವಿಕಾಸ್ ಹೆಗಡೆ/ Vikas Hegde said...

very gud info. ಈಗಿನ ಎಷ್ಟೋ ಜನರಿಗೆ ಇವು ಗೊತ್ತೇ ಇರಲ್ಲ... ಬಹಳ ಥ್ಯಾಂಕ್ಸ್. ನನಗೂ ಸುಮಾರು ವಿಷ್ಯ ಗೊತಾಯ್ತು.

M G Harish said...

ಶ್ರಾವಣ ಶುಕ್ಲ ಅಷ್ಟಮಿ - ಹತ್ತಿ ಪೂಜೆ

ಆದರೆ ನನಗೆ ವಿವರವಾಗಿ ಅದರ ಬಗ್ಗೆ ತಿಳಿದಿಲ್ಲ.

ಈ ರೀತಿ ಪಟ್ಟಿ ಮಾಡಿರುವುದಕ್ಕೆ ಧನ್ಯವಾದಗಳು

chinni said...

Hi Karthik,

thumba chennagi bardidira..innu swalpa neevu aad maadbodu mangala gowri poojege,maduve aagakke munche kooda 4 years pooje maadi.maduve aadmele 5th year complete maadtaare..matte aadina kathe helovaaga jade haaktaaralla matte thale baachalla avattu.matte mukha kooda wash maadalla..

soumya said...

na bareda comment yaako chinni anta bandide.thos is soumya(acs)