Monday, August 13, 2007

ವಿಚಿತ್ರಾನ್ನ ಪುಸ್ತಕ ಬಿಡುಗಡೆ

ನಿಮ್ಮಲ್ಲಿ ಬಹಳ ಮಂದಿಗೆ ವಿಚಿತ್ರಾನ್ನ ಗೊತ್ತು ಅಂತ ತಿಳಿದು ಈ ಬ್ಲಾಗ್ ಐಟಮ್.
ಶ್ರೀವತ್ಸ ಜೋಶಿಯವರ ವಿಚಿತ್ರಾನ್ನ ಅನ್ನೋ ಪ್ರತಿ ವಾರದ ಅಂಕಣ ಬಹಳ ಪ್ರಸಿದ್ಧಿ. ಆ ಎಲ್ಲಾ ಬರಹಗಳ ಸಂಗ್ರಹವೇ ವಿಚಿತ್ರಾನ್ನ ಪುಸ್ತಕಗಳು. ನೆನ್ನೆ ೨ ಪುಸ್ತಕ ಬಿಡುಗಡೆ ಆಯ್ತು. ಇದಕ್ಕೆ ಮುಂಚೆ ಒಂದು ಪುಸ್ತಕ ಬಿಡುಗಡೆ ಮಾಡಿದ್ರು. ನೆನ್ನೆಯ ಕಾರ್ಯಕ್ರಮಕ್ಕೆ ಜೋಶಿಗಳು ನನ್ನ ವೈಯ್ಯಕ್ತಿಕವಾಗಿ ದೂರವಾಣಿ ಮೂಲಕ ಕರೆದಾಗಲೇ ನನಗೆ ಬಹಳ ಸಂತೋಷವಾಯ್ತು. ನೆನ್ನೆ ಕಾರ್ಯಕ್ರಮದಲ್ಲೆ ಆ ಸನ್ತೋಷಕ್ಕೆ ಸಾರ್ಥಕತೆ ದೊರೆಯಿತು.. ಅಬ್ಬ ಅಬ್ಬ ಅಬ್ಬ .. ಅದೆಷ್ಟು ಚೆನ್ನಾಗಿತ್ತು ಗೊತ್ತಾ .. ಡುಂಡಿ ರಾಜ್ ರವರ ಅಧ್ಯಕ್ಷತೆಯಲ್ಲಿ ಪುಸ್ತಕ ಬಿಡುಗಡೆ ಆಯ್ತು. ಡುಂಡಿ ರಾಜ್ ರವರ ಡುಂ ಡುಂ ಡುಂ ನಮಗೆಲ್ಲ ರಾಕ್ ಎನ್ ರೋಲ್ ಮಾಡಿತು. ಜೋಶಿಯವರು ’ಪನ್’ ಗಳಿಗೆ ಬಹಳ ಫೇಮಸ್.. ಪನ್ ಗಳ ಫನ್ ಧಮ್ ಧಮಾ ಧಮ್ ಆಗಿತ್ತು.

ಅವರ ಮೂರೂ ಪುಸ್ತಕ ಕೊಂಡು ಓದೋದಿಕ್ಕೆ ಶುರು ಮಾಡಿದೀನಿ. ಬಹಳ ಚೆನ್ನಾಗಿದೆ. ನೀವು ಕೊಂಡು ಓದಿರಿ ..

2 comments:

Sri said...

Kar, idu nijakku aparoopa - kannada pusthaka vanna ododu, adara bagge kannada dalle blog post maadodu...really makes me humble and think back about my roots.

Don't stop :)

ಸುಶ್ರುತ ದೊಡ್ಡೇರಿ said...

ಪ್ರೋಗ್ರಾಮಿಗೆ ನಾನೂ ಬಂದಿದ್ನಲ್ಲ.. ಎಲ್ರೀ ಕೂತಿದ್ರಿ ನೀವು?! :o