Monday, July 21, 2008

ಗುರು ಪೂರ್ಣಿಮೆ

ಪ್ರತೀ ವರ್ಷದ ಆಶಾಢ ಮಾಸದ ಹುಣ್ಣಿಮೆ ದಿನ ಇಡೀ ಭಾರತದಲ್ಲಿ ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಭಾರತದಲ್ಲಿ ಗುರುವಿಗೆ ಅತ್ಯಂತ ಮಹತ್ವ ಕೊಡಲಾಗಿದೆ. ’ಗುರು ದೇವೋ ಭವ’ ಎಂದು ಹೇಳಲಾಗಿದೆ. ಮನೆಯೆ ಮೊದಲ ಪಾಠಶಾಲೆ ಅಮ್ಮನೆ ಮೊದಲ ಗುರು ಎಂದೂ ಸಹ ಹೇಳಲಾಗಿದೆ.  ’ಕಲಿಸಿದಾತಂ ವರ್ಣಮಾತ್ರಂ ಗುರು’ ಎಂದು ನಾವು ನಂಬಿದ್ದೇವೆ. ಮೊನ್ನೆ ಶುಕ್ರವಾರ ಗುರು ಪೂರ್ಣಿಮೆ ಇತ್ತು. ಅದರ ಸಲುವಾಗಿ ನನ್ನ ಜೀವಮಾನದ ಎಲ್ಲ ಮಹತ್ವದ ಗುರುಗಳನ್ನು ನಾನು ನೆನೆಸಿಕೊಳ್ಳಲು ಇಚ್ಚಿಸುತ್ತೇನೆ. ಇದರ ಮೂಲಕ ಅವರೆಲ್ಲರಿಗೂ ನನ್ನ ಮನಃ ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ.

 

ಹೆಸರು ವಿವರ
ಅಮ್ಮ ಏನು ಬಿಟ್ಟಿದಾರೆ ನಮ್ಮಮ್ಮ. ಇನ್ನೂ ಕಲಿಸ್ತಾನೇ ಇದ್ದಾರೆ ನಮ್ಮಮ್ಮ. ನಾನು ಹುಟ್ಟಿದಾಗಿನಿಂದ ಮಾತು, ನಡಿಗೆಯಿಂದ ಹಿಡಿದು, ವಿವೇಕದ ತನಕ ಎಲ್ಲಾ ಹೇಳಿ ಕೊಟ್ಟಿದ್ದಾರೆ
ಸರಸ್ವತಿ ಟೀಚರ್ ನರ್ಸರಿ ಟೀಚರ್
ಎಲ್. ಪಿ. ಟೀಚರ್ ಪ್ರೈಮರಿ ಟೀಚರ್
ಸೋಮಣ್ಣ ಶಾಸ್ತ್ರಿಗಳು ಬ್ರಹ್ಮೋಪದೇಶ, ಸಂಧ್ಯಾವಂದನೆ ಇತ್ತ್ಯಾದಿ
ಏ.ವಿ. ಸತ್ಯನಾರಾಯಣ ಹೈಯರ್ ಪ್ರೈಮರಿ ಸಾರ್. ನಮಗೆ ಬುನಾದಿ ಹಾಕಿ ಕೊಟ್ಟವರು
ಕೆ. ಎಸ್. ಟೀಚರ್ ನೀತಿ ಪಾಠ ಹೇಳಿ ಕೊಟ್ಟವರು
ಎಸ್. ಎಸ್. ಟೀಚರ್ ಗಣಿತ ಹೇಳಿಕೊಟ್ಟವರು
ಸುಬ್ರಮಣ್ಯ ಅಡಿಗರು
ಸತ್ಯ ನಾರಾಯಣರು
ಲಕ್ಷ್ಮೀಕಾಂತರು
ನನಗೆ ವೇದ ಪಾಠ, ದೇವರ ಪೂಜೆ, ಪವಮಾನ ಸೂಕ್ತ, ರುದ್ರ, ಇತರ ಸೂಕ್ತ ಗಳನ್ನು ಹೇಳಿ ಕೊಟ್ಟವರು
ಶ್ರೀಧರ್ ಹೆಗ್ಗಡೆ ಸಂಸ್ಕೃತ ಹೇಳಿಕೊಟ್ಟವರು
ಡಿ. ವಿ. ನಾಗೇಶ್ ಪ್ರೌಢ ಶಾಲೆಯಲ್ಲಿ ಗಣಿತ ಹೇಳಿಕೊಟ್ಟವರು
ಪದ್ಮಾ ರೆಡ್ಡಿ ಇಂಜಿನಿಯರಿಂಗ್ ನಲ್ಲಿ compiler design ಹೇಳಿ ಕೊಟ್ಟವರು

 

ಇನ್ನೂ ಅನೇಕರು .. ಮತ್ತೊಮ್ಮೆ ಮುಂದುವರೆಸುತ್ತೇನೆ. ಸದ್ಯಕ್ಕೆಇವರಿಗೆಲ್ಲ ನನ್ನ ಅನಂತಾನಂತ ಪ್ರಣಾಮಗಳು

3 comments:

ಸುಶ್ರುತ ದೊಡ್ಡೇರಿ said...

idoo onthara chanagide prayathna.

modala hesaraagi ammananna iTTidoo chennagide.

Lakshmi S said...

ಗುರುಪೂರ್ಣಿಮೆಯಂದು ಗುರುಗಳನ್ನು ನೆನಪಿಸಿಕೊಂಡಿದ್ದೀರಿ, ಓದಿ ಸಂತೋಷವಾಯ್ತು.

Shashi said...

You are unbelievable. Nange guru poornime anta ondu ide anta gotte iralilla, enta wastebody naanu. Odta idre khushi aaytu, naanu nanna gurugaLa bagge ella jnapisikonDe. Thanks Karthik:)